ETV Bharat / state

ಚಾಮರಾಜನಗರದಲ್ಲಿ 20 ಮಂದಿಗೆ ಸೋಂಕು ದೃಢ...19 ಮಂದಿ ಗುಣಮುಖ

author img

By

Published : Jul 25, 2020, 8:25 PM IST

ಜಿಲ್ಲೆಯಲ್ಲಿಂದು 20 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು 19 ಜನರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.

Chamrajnagara corona case
Chamrajnagara corona case

ಚಾಮರಾಜನಗರ: ಇಂದು ಹೊಸದಾಗಿ 20 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 475ಕ್ಕೆ ಏರಿಕೆಯಾಗಿದೆ.‌

ಇಂದು ಪತ್ತೆಯಾದ 20 ಪ್ರಕರಣಗಳಲ್ಲಿ 10 ಕಂಟೈನ್​ಮೆಂಟ್ ವಲಯದ್ದಾಗಿದ್ದು, ಐವರು ಮೈಸೂರಿನ ಸಂಪರ್ಕ ಹೊಂದಿದ್ದಾರೆ‌. ಉಳಿದ ಐವರ ಸಂಪರ್ಕ ಪತ್ತೆಹಚ್ಚಬೇಕಿದೆ.‌ ಸೋಂಕಿತರಲ್ಲಿ 14 ವರ್ಷದ ಇಬ್ಬರು ಮಕ್ಕಳು ಸೇರಿದ್ದಾರೆ.

19 ಮಂದಿ‌ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ 19 ಸಾವಿರ ದಾಟಿದ್ದು, ಇಂದು ಒಂದೇ ದಿನ 787 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೇ, 406 ಮಂದಿ ಸಂಪರ್ಕಿತರ ಮೇಲೂ ನಿಗಾ ಇಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.