ಚಾಮರಾಜನಗರ: ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದ ಬಳಿ ನಿನ್ನೆ ರಾತ್ರಿ ಪೆಟ್ರೋಲ್ ಟ್ಯಾಂಕರ್ ಹಾಗೂ ಎರಡು ಬೈಕ್ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ದುರ್ಮರಣ ಹೊಂದಿದ್ದಾರೆ.
ತಾಲೂಕಿನ ಚಂದುಕಟ್ಟೆ ಮೋಳೆ ಗ್ರಾಮದ ಮಹೇಶ್ (23), ಹುಲ್ಲಾಪುರದ ಮಣಿಕಂಠ(24) ಮೃತ ಯುವಕರು. ಹರದನಹಳ್ಳಿಯ ಕಡೆಯಿಂದ ಬಂದ ಪೆಟ್ರೋಲ್ ಟ್ಯಾಂಕರ್ ಚಾಮರಾಜನಗರದ ಕಡೆಯಿಂದ ಬರುತ್ತಿದ್ದ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಮೊದಲು ಡಿಕ್ಕಿ ಹೊಡೆದ ಬೈಕ್ನ ಸವಾರ ಮಣಿಕಂಠ ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರೆ, ನಂತರ ಡಿಕ್ಕಿ ಹೊಡೆದ ಬೈಕ್ ಸವಾರ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತುಂಗಾಭದ್ರಾ ನದಿಗೆ ನೀರು ಬಿಡುಗಡೆ: ಹಂಪಿಯ ಸ್ಮಾರಕಗಳು ಮುಳುಗಡೆ
ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.