ETV Bharat / state

ಯುವಕರನ್ನು ನಾಚಿಸುತ್ತಿರುವ ವೃದ್ಧರು... ಮತದಾನ ಮಾಡಿ ಗಮನ ಸೆಳೆದ ಶತಾಯುಷಿ ಅಜ್ಜಿ

ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾ.ಪಂ. ಚುನಾವಣೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಯುವಕರನ್ನು ನಾಚಿಸುವಂತೆ ಹಿರಿಯರು ಉತ್ಸಾಹದಿಂದ ಹಕ್ಕನ್ನು ಚಲಾಯಿಸುತ್ತಿದ್ದಾರೆ.

chamarajnagar
ಮತದಾನ ಮಾಡಿದ ಶತಾಯುಷಿ ಅಜ್ಜಿ
author img

By

Published : Dec 22, 2020, 12:55 PM IST

Updated : Dec 22, 2020, 1:28 PM IST

ಚಾಮರಾಜನಗರ: ಚುನಾವಣೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡುವ ಮೂಲಕ ಗಮನ ಸೆಳೆದಿರುವ ಘಟನೆ ತಾಲೂಕಿನ ಕುಲಗಾಣ ಗ್ರಾ.ಪಂ. ವ್ಯಾಪ್ತಿಯ ಹಿರೇಬೇಗೂರು ಗ್ರಾಮದಲ್ಲಿ ನಡೆದಿದೆ.

ಮತದಾನಕ್ಕೆ ಯುವ ಸಮುದಾಯಕ್ಕಿಂತ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ.

ಮಾದಮ್ಮ ಎಂಬ 101 ವರ್ಷದ ವೃದ್ಧೆ ಶಿಕ್ಷಕರಾದ ಮಧು ಹಾಗೂ ರವಿ ಎಂಬುವರ ಸಹಾಯದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾತಂತ್ರದ ಉತ್ಸವದ ಮಹತ್ವ ಸಾರಿದ್ದಾರೆ.

chamarajnagar
ಮತದಾನಕ್ಕೆ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ.

ಓದಿ: ಮಡಿಕೆ ಬದಲು ಸಿಲಿಂಡರ್​ : ಚಿಹ್ನೆ ಮುದ್ರಣ ದೋಷದಿಂದ ಮತಗಟ್ಟೆಯಲ್ಲಿ ವೋಟಿಂಗ್​ ಸ್ಥಗಿತ

ಮತದಾನಕ್ಕೆ ಯುವ ಸಮುದಾಯಕ್ಕಿಂತ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಬೆಳಗಿನ ಚಳಿ ಲೆಕ್ಕಿಸದೇ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಭ್ರಮದಿಂದ ಮತದಾನದಲ್ಲಿ ಪಾಲ್ಗೊಂಡು ಯುವ ಸಮುದಾಯದವರನ್ನೇ ನಾಚಿಸುವಂತೆ ಮಾಡಿದ್ದು ವಿಶೇಷ. ಊರುಗೋಲು, ವ್ಹೀಲ್​ಚೇರ್​ಗಳ ಮೂಲಕ ಆಗಮಿಸಿ ಮತದಾನದ ಮಹತ್ವ ಸಾರಿದ್ದಾರೆ.

Last Updated : Dec 22, 2020, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.