ETV Bharat / state

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ: ಕೆ.ಸಿ.ವೇಣುಗೋಪಾಲ್ ಹೇಳಿದ್ದೇನು?

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

author img

By

Published : Apr 27, 2019, 8:31 PM IST

ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಲ್ಪನಿಕ‌ ವಿಚಾರಗಳ‌ ಸಂಬಂಧ ನಾನು ಉತ್ತರ ನೀಡಲ್ಲ ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ವಾಸ್ತವ ವಿಚಾರಗಳಿಗೆ ಮಾತ್ರ ಉತ್ತರ ಕೊಡುತ್ತೇನೆ, ಕಾಲ್ಪನಿಕ ವಿಷಯಗಳಿಗೆ ನಾನು ಉತ್ತರ ಕೊಡಲ್ಲ. ನಾವು ಲೋಕಸಭೆ ಚುನಾವಣೆ, ಎರಡು ಕ್ಷೇತ್ರಗಳ ಉಪಚುನಾವಣೆ ಕಡೆ ಗಮನ ಕೊಟ್ಟಿದ್ದೇವೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ದೇಶದ ಭವಿಷ್ಯಕ್ಕೆ ಈ ಚುನಾವಣೆ ಮುಖ್ಯವಾಗಿದೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೋಪಾಲ್

ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿ, ಸರ್ಕಾರ ಪತನಗೊಳಿಸುವ ಕನಸು ಕಾಣುತ್ತಿದೆ. ಬಿಜೆಪಿಯವರಿಗೆ ರಾಜ್ಯದ ಜನತೆಯ ತೀರ್ಪಿನ ಮೇಲೆ ನಂಬಿಕೆ ಇಲ್ಲ. ಬದಲಾಗಿ ಅವರು ಕುದುರೆ ವ್ಯಾಪಾರದ ಮೇಲೆ ನಂಬಿಕೆ ಇಟ್ಟವರು. ಅವರು ಮೊದಲು ಶಾಸಕರನ್ನು ಚುನಾಯಿಸಿರುವ ಜನರ ತೀರ್ಪಿಗೆ ಬೆಲೆ ಕೊಡಬೇಕು. ಮೇ 23 ರ ಫಲಿತಾಂಶ ಸರ್ಕಾರ ರಚಿಸುವ ಕನಸು ಕಾಣ್ತಿರುವ ಬಿಜೆಪಿಗೆ ಉತ್ತರ ಕೊಡಲಿದೆ ಎಂದು ಟಾಂಗ್ ಕೊಟ್ಟರು.

ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಅತ್ಯಂತ ಹೆಚ್ಚು ಪರಿಣಾಮಕ್ಕೊಳಗಾಗುವ ವ್ಯಕ್ತಿಯಾಗಲಿದ್ದಾರೆ. ನನ್ನ ಮಾತಿನ ಅರ್ಥ ನಿಮಗೆ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.

Intro:Kc venugopal byteBody:KN_BNG_03_27_KCVENUGOPAL_BYTE_SCRIPT_VENKAT_7201951

ರಮೇಶ್ ಜಾರಕಿಹೊಳಿ ರಾಜೀನಾಮೆ ಸಂಬಂಧ ಕೆ.ಸಿ.ವೇಣುಗೋಪಾಲ್ ಹೇಳಿದ್ದೇನು?

ಬೆಂಗಳೂರು: ಕಾಲ್ಪನಿಕ‌ ವಿಚಾರಗಳ‌ ಸಂಬಂಧ ನಾನು ಉತ್ತರ ನೀಡಲ್ಲ ಎಂದು ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ರಿಯಾಲಿಟಿ ವಿಚಾರಗಳಿಗೆ ಮಾತ್ರ ಉತ್ತರ ಕೊಡುತ್ತೇನೆ. ಕಾಲ್ಪನಿಕ ವಿಷಯಗಳಿಗೆ ನಾನು ಉತ್ತರ ಕೊಡಲ್ಲ. ನಾವು ಲೋಕಸಭೆ ಚುನಾವಣೆ, ಎರಡು ಕ್ಷೇತ್ರಗಳ ಉಪಚುನಾವಣೆ ಕಡೆ ಗಮನ ಕೊಟ್ಟಿದ್ದೇವೆ. ಈ ಲೋಕಸಭೆ ಚುನಾವಣೆ ದೇಶದ ಭವಿಷ್ಯಕ್ಕೆ ಮುಖ್ಯವಾಗಿದೆ. ದೇಶದಲ್ಲಿ ಹಲವು ಸಮಸ್ಯೆವಳಿವೆ ಎಂದು ಪರೋಕ್ಷವಾಗಿ ವಿವರಿಸಿದರು.

ಆಪರೇಷನ್ ಕಮಲ ವಿಚಾರಬಾಗಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ಪಥನಗೊಳಿಸುವ ಕನಸು ಕಾಣುತ್ತಿದೆ. ಬಿಜೆಪಿ ಯವರು ರಾಜ್ಯದ ಜನತೆಯ ತೀರ್ಪಿನ ಮೇಲೆ ನಂಬಿಕೆ ಇಟ್ಟಿಲ್ಲ. ಬಿಜೆಪಿ ಯವರು ಕುದುರೆ ವ್ಯಾಪಾರದ ಮೇಲೆ ನಂಬಿಕೆ ಇಟ್ಟವರು. ಬಿಜೆಪಿಯವರು ಶಾಸಕರನ್ನು ಚುನಾಯಿಸಿರುವ ಜನರ ತೀರ್ಪಿಗೆ ಬೆಲೆ ಕೊಡಬೇಕು. ಮೇ 23 ರ ಫಲಿತಾಂಶ ಸರ್ಕಾರ ರಚಿಸುವ ಕನಸು ಕಾಣ್ತಿರುವ ಬಿಜೆಪಿಗೆ ಉತ್ತರ ಕೊಡಲಿದೆ ಎಂದು ಟಾಂಗ್ ನೀಡಿದರು.

ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಅತ್ಯಂತ ಹೆಚ್ಚು ಪರಿಣಾಮ ಕ್ಕೊಳಗಾಗುವ ವ್ಯಕ್ತಿಯಾಗಲಿದ್ದಾರೆ. ನನ್ನ ಮಾತಿನ ಅರ್ಥ ನಿಮಗೆ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.Conclusion:Venkat

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.