ETV Bharat / state

ಸರ್ಕಾರ ಜನರ ವಿಶ್ವಾಸದಿಂದ ಆಯ್ಕೆಗೊಂಡಿಲ್ಲ; ಶಾಸಕ ಸಿ.ಟಿ. ರವಿ

ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರ ಜನರ ವಿಶ್ವಾಸ ಗಳಿಸಿ ಆಯ್ಕೆಗೊಂಡಿಲ್ಲ. ಪ್ರಸ್ತುತ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಶಾಸಕ ಸಿ.ಟಿ ರವಿ ಆಗ್ರಹಿಸಿದರು.

ಮೈತ್ರಿ ಸರ್ಕಾರ ಸಿ.ಟಿ. ರವಿ ಟೀಕಾ ಪ್ರಹಾರ
author img

By

Published : Jul 18, 2019, 1:41 PM IST

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸ ಮತಗಳೇ ಇಲ್ಲ. ಎಲ್ಲದಕ್ಕಿಂದ ಹೆಚ್ಚಾಗಿ ಈ ಸರ್ಕಾರ ಜನರ ವಿಶ್ವಾಸದಿಂದ ಆಯ್ಕೆಗೊಂಡ ಸರ್ಕಾರವಲ್ಲ. ತಾಂತ್ರಿಕ ಕಾರಣಕ್ಕೆ ಕಾಂಗ್ರೆಸ್​-ಜೆಡಿಎಸ್ ಒಟ್ಟಾಗಿ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ರು. ಹೇಳಿಕೊಂಡಿದ್ದು ದೋಸ್ತಿ ಸರ್ಕಾರ, ಆದರೆ ಆಗಿದ್ದು ದುಷ್ಮನ್ ಸರ್ಕಾರ ಎಂದು ಶಾಸಕ ಸಿ.ಟಿ ರವಿ ಟೀಕಿಸಿದರು.

ಮೈತ್ರಿ ಸರ್ಕಾರ ಸಿ.ಟಿ. ರವಿ ಟೀಕಾ ಪ್ರಹಾರ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್​ ಮತ್ತು ಕಾಂಗ್ರೆಸ್​ ಎಂದೂ ದೋಸ್ತಿ ಸರ್ಕಾರದಂತೆ ನಡೆದುಕೊಂಡಿಲ್ಲ. ಬದಲಾಗಿ ಪರಸ್ಪರ ಕಚ್ಚಾಡಿಕೊಂಡು ಕಾಲ ಕಳೆದಿದ್ದಾರೆ ಎಂದರು. ಇಂದು ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿಗೆ ರಾಜಭವನಕ್ಕೆ ಹೋಗಿ ರಾಜೀನಾಮೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

ಇನ್ನು ಇದೇ ವೇಳೆ ಸೋಮಣ್ಣ ಸಿ.ಟಿ. ರವಿಯವರ ಹುಟ್ಟು ಹಬ್ಬಕ್ಕೆ ಹಾರೈಸಿ ಶುಭಕೋರಿದರು. ನಂತರ ಸೋಮಣ್ಣನವರ ಕಾಲಿಗೆ ಬಿದ್ದು ಸಿ.ಟಿ. ರವಿ ಆರ್ಶಿವಾದ ಪಡೆದರು.

ಬಳಿಕ ಮಾತನಾಡಿದ ಬಿಜೆಪಿ ಶಾಸಕ ಸೋಮಣ್ಣ, ಸರ್ಕಾರ ಬರುತ್ತೆ ಹೋಗುತ್ತೆ. ಸಂವಿಧಾನದ ನಿಯಮ ಪ್ರಕಾರ ಮುಂದುವರೆದುಕೊಂಡು ಹೋಗಬೇಕು. ಬಹುಮತ ಇಲ್ಲ ಎಂದಾಗಲೂ ಇಷ್ಟು ಕೀಳು ಮಟ್ಟಕ್ಕೆ ಹೋಗಬಾರದು. ನಿಯಮ ಪಾಲಿಸಿಕೊಂಡು ರಾಜೀನಾಮೆ ನೀಡಿದರೆ ಒಳಿತು ಎಂದು ತಿಳಿಸಿದರು.

Intro:Body:

1 ct ravi new.txt   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.