ನೆಲಮಂಗಲ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐದು ದರೋಡೆ ಕೋರರನ್ನು ಬಂಧಿಸುವಲ್ಲಿ ನೆಲಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಯಂತ್ (26), ಶ್ರೀನಿವಾಸ್ (26), ಯತೀಶ್ (22), ನಾಗೇಶ್ (24), ಚಂದ್ರಶೇಖರ್ (23) ಬಂಧಿತ ಆರೋಪಿಗಳು. ಬೆಂಗಳೂರು, ತುಮಕೂರಿನ ಹಲವೆಡೆ ದರೋಡೆ ಮಾಡಿದ ಆರೋಪ ಇವರ ಮೇಲಿತ್ತು.
ಬಂಧಿತರಿಂದ 20 ಲಕ್ಷ ನಗದು, 300 ಗ್ರಾಂ ಚಿನ್ನ, 3ಬೈಕ್,1 ಟೆಂಪೋ, ವಾಹನದ ಬಿಡಿಭಾಗಗಳನ್ನ ವಶಕ್ಕೆ ಪಡೆಯಲಾಗಿದೆ. 5 ಜನ ಆರೋಪಿಗಳ ಮೇಲೆ ಪ್ರತ್ಯೇಕವಾಗಿ ದಾಬಸ್‌ಪೇಟೆ ಹಾಗೂ ನೆಲಮಂಗಲ ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೊನೆಗೂ ನೆಲಮಂಗಲ ಉಪ ವಿಭಾಗದ ಪೊಲೀಸರು ಐವರನ್ನು ಬಂಧಿಸಿದ್ದಾರೆ.