ಬೆಂಗಳೂರು: ಕ್ಲೋಸ್ ಆಗಿದ್ದ ಬ್ಯಾಂಕ್ ಅಕೌಂಟ್ ರೀ ಒಪನ್ ಮಾಡಿ 2.5 ಕೋಟಿ ರೂ. ಟ್ರಾಂಜಾಕ್ಷನ್ ಮಾಡಿ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಏನಿದು ಘಟನೆ?
ಕಂಚನಾ ಹಾಗೂ ಮಂಡೇಕರ್ ಎಂಬ ದಂಪತಿ ಬಸವನಗುಡಿಯ ಹೆಚ್‌ಬಿ ಸಮಾಜ ರಸ್ತೆಯಲ್ಲಿರುವ ಶ್ರೀ ಚರಣ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿದ್ದರು. ಹಾಗೇ ಇವರು ಸೀಮ್‌ಲೈನ್ ಟೆಕ್ನಿಕ್ ಎಂಬ ಹೆಸರಿನ ಕಂಪನಿ ನಡೆಸುತ್ತಿದ್ದರು.
ಹೀಗಾಗಿ ದಂಪತಿಗೆ ಚರಣ್ ಕೋ ಆಪರೇಟಿವ್ ಬ್ಯಾಂಕ್ನ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಸನ್ನ ಎಂಬುವರ ಪರಿಚಯವಾಗಿತ್ತು. ತಮ್ಮ ಕಂಪನಿಯ ವಹಿವಾಟಿನಲ್ಲಿ ಬರುವ ಚೆಕ್ನ ದಂಪತಿ ಪ್ರಸನ್ನ ಎಂಬುವರಿಗೆ ನೀಡಿ ಹಣ ಜಮೆ ಮಾಡುತ್ತಿದ್ದರು. ಆದರೆ, ದಂಪತಿ ಈ ವಹಿವಾಟನ್ನ 2004 ರಿಂದ 5ರವರೆಗೆ ಮಾತ್ರ ಮಾಡಿದ್ದರು. ಇದಾದ ಬಳಿಕ 2008ರಲ್ಲಿ ಹಣಕಾಸಿನ ವ್ಯವಹಾರ ನಡೆಸುವುದನ್ನು ನಿಲ್ಲಿಸಿದ್ದರು. ಹಾಗಾಗಿ ಅಕೌಂಟ್ ಕ್ಲೋಸ್ ಮಾಡಲಾಗಿತ್ತು.
![IT officers give Notice to couples](https://etvbharatimages.akamaized.net/etvbharat/prod-images/kn-bng-01-23-it-notice-bhavya-7204498_23062019082613_2306f_1561258573_308.jpg)
ಆದರೆ, ಇದೀಗ ದಂಪತಿಯ ಗಮನಕ್ಕೂ ಬಾರದೇ 2019ರ ಮೇನಲ್ಲಿ 2 ಕೋಟಿ 25 ಲಕ್ಷ ರೂ. ಅಕ್ರಮ ಹಣವನ್ನ ಹಂತ ಹಂತವಾಗಿ ಜಮೆ ಮಾಡಲಾಗಿದ್ದು, ಹಣವನ್ನ ಚೆಕ್ಗಳ ಮೂಲಕ ಹಲವರಿಗೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಆದಾಯ ತೆರಿಗೆ ಅಧಿಕಾರಿಗಳು ದಂಪತಿಗೆ ನೋಟಿಸ್ ನೀಡಿ ಕೋಟಿ ಕೋಟಿ ವಹಿವಾಟಿನ ಬಗ್ಗೆ ಬೇಕಾದ ದಾಖಲೆ ಒದಗಿಸಿ ಎಂದು ತಿಳಿಸಿದ್ದಾರೆ. ದಂಪತಿಗೆ ಐಟಿ ನೋಟಿಸ್ ನೋಡಿ ಶಾಕ್ ಆಗಿದೆ. ಈ ಕುರಿತು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.