ETV Bharat / state

ಧರಂಸಿಂಗ್​ ನೇತೃತ್ವದ ಮೈತ್ರಿ ಸರ್ಕಾರದ ಏಳುಬೀಳಿನ ಚಿತ್ರಣ! - undefined

ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು 2004ರಲ್ಲಿ. ಅಂದಿನ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಪಕ್ಷಗಳ ಸಾರಥ್ಯ ವಹಿಸಿದ್ದವರು ಮುಖ್ಯಮಂತ್ರಿ ಧರಂಸಿಂಗ್, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ.

Parties
author img

By

Published : Jul 7, 2019, 9:02 PM IST

ಬೆಂಗಳೂರು: ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು 2004ರಲ್ಲಿ. ಅಂದಿನ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಪಕ್ಷಗಳ ಸಾರಥ್ಯ ವಹಿಸಿದ್ದವರು ಮುಖ್ಯಮಂತ್ರಿ ಧರಂಸಿಂಗ್, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ. ಐದು ವರ್ಷಗಳ ಪೂರ್ಣಾವಧಿ ಆಡಳಿತ ನೀಡುತ್ತೇವೆಂದು ಹೇಳುತ್ತಲೇ ಒಂದೂವರೆ ವರ್ಷದ ಅವಧಿಯಲ್ಲೇ ಸರ್ಕಾರ ಪತನಗೊಂಡಿತು. ಜೆಡಿಎಸ್ ಬೆಂಬಲ ವಾಪಸ್ ಪಡೆದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ಧರಂಸಿಂಗ್ ರಾಜೀನಾಮೆ ನೀಡಿದರು.

ಮೊದಲ ಸಮ್ಮಿಶ್ರ ಸರ್ಕಾರದ ಅಲ್ಪಾವಧಿಯ ಏಳು-ಬೀಳುಗಳ ಚಿತ್ರಣ ಇಲ್ಲಿದೆ... ಅದಾಗಲೇ ರಾಷ್ಟ್ರ ಮಟ್ಟದಲ್ಲಿ ಅನೇಕ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿದ್ದವು. ಆದರೆ, ಅವುಗಳಲ್ಲಿ ಯಶಸ್ವಿಯಾಗಿ ಆಡಳಿತ ನಡೆಸಿರುವುದು ಬೆರಳೆಣಿಕೆಯಷ್ಟು ಮಾತ್ರ. ರಾಜ್ಯದಲ್ಲೂ ಸಹ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಮತ್ತು ಹೊಂದಾಣಿಕೆ ಸ್ವಭಾವದ ಧರಂಸಿಂಗ್ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದರು. ಆದರೆ, ಆದದ್ದೇ ಬೇರೆ. ಸಿದ್ದರಾಮಯ್ಯ ಅವರ ಪಕ್ಷಾಂತರ ಹಾಗೂ ಜೆಡಿಎಸ್​​ ಬೆಂಬಲ ವಾಪಸ್​ ಪಡೆದ ಕಾರಣ ಧರಂಸಿಂಗ್ ಸರ್ಕಾರ ಬಲಿಯಾಗಬೇಕಾಯಿತು.

ಸಮ್ಮಿಶ್ರ ಸರ್ಕಾರದ ವೈಫಲ್ಯಗಳು ನಿನ್ನೆ, ಮೊನ್ನೆಯದಲ್ಲ. ಈ ಹಿಂದೆಯೂ ನಡೆದಿದ್ದವು. ಸ್ವಲ್ಪ ಹಿಂದಿನ ಘಟನಾವಳಿಗಳನ್ನು ಗಮನಿಸಿದರೆ 1983 ರಿಂದ 1985ರವರೆಗೆ ದಿ. ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರಾದರೂ ಮಧ್ಯಂತರ ಚುನಾವಣೆಯ ಬಳಿಕ ಹೆಗಡೆಯವರಿಗೆ ಅದು ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ.

ಇನ್ನು 2004ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತು. ಅವರ ಸರ್ಕಾರದಲ್ಲಿ ಇದ್ದ 30ಕ್ಕೂ ಹೆಚ್ಚು ಸಚಿವರೂ ಸೋಲನುಭವಿಸಿದರು. ಇಂತಹ ತೀವ್ರ ಆಡಳಿತ ವಿರೋಧಿ ಅಲೆಯ ನಡುವೆಯೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅಭೂತಪೂರ್ವ ಗೆಲವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಅದು ಅತಂತ್ರ ಜನಾದೇಶವಾಗಿತ್ತು. ಬಿಜೆಪಿ ಅತಿ ಹೆಚ್ಚು ಅಂದರೆ 79 ಸೀಟುಗಳನ್ನು ಗೆದಿದ್ದರೆ, ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಸ್ಥಾನಗಳನ್ನು ಪಡೆದಿದ್ದವು.

ಹಾಗೆ ನೋಡಿದರೆ ಅದು ವಿರೋಧ ಪಕ್ಷಗಳಿಗೆ ಅಧಿಕಾರ ರಚಿಸಲು ಸಿಕ್ಕ ಜನಾದೇಶವಾಗಿತ್ತು. ಜಾತ್ಯಾತೀತ ತತ್ವಕ್ಕೆ ಕಟ್ಟುಬಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ ಜೊತೆಗೆ ಅಧಿಕಾರ ಮಾಡುವುದು ಸಾಧ್ಯವಿರಲಿಲ್ಲ. ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಬಯಸಿದ್ದ ಕಾಂಗ್ರೆಸ್​​ಗೆ ದೇವೇಗೌಡರ ಬೆಂಬಲದ ಇಂಗಿತ ವರದಾನವಾಗಿ ಬಂತು. ಆದರೆ, ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಸ್.ಎಂ.ಕೃಷ್ಣ ಅವರಿಗೇ ಹೆಚ್ಚು ಬೆಂಬಲ ಸಿಕ್ಕಿತು. 40ಕ್ಕಿಂತ ಹೆಚ್ಚು ಶಾಸಕರು ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸಿದರು.

ಎಸ್.ಎಂ.ಕೃಷ್ಣ ಅವರು ದೇವೇಗೌಡರ ನಿವಾಸಕ್ಕೆ ತೆರಳಿ ತಾವು ಮತ್ತೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಬೇಕೆಂದು ಕೋರಿದ್ದರು. ಆದರೆ, ಮತ್ತೊಬ್ಬ ಒಕ್ಕಲಿಗ ನಾಯಕನಿಗೆ ಪಟ್ಟ ಕಟ್ಟಿ ತಾವು ಹಿನ್ನಡೆ ಅನುಭಸಲು ದೇವೇಗೌಡರು ಸಿದ್ಧರಿರಲಿಲ್ಲ. ಹಾಗಾಗಿ, ಅವರ ಆಯ್ಕೆ ಧರಂಸಿಂಗ್ ಅವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಧರಂಸಿಂಗ್ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವ ಮನುಷ್ಯ ಎಂಬುದೂ ದೇವೇಗೌಡರ ಲೆಕ್ಕಾಚಾರವಾಗಿತ್ತು. ಹಾಗಾಗಿ, ಅವರನ್ನು ಬೆಂಬಲಿಸಿದರಂತೆ.

ಮುಖ್ಯಮಂತ್ರಿ ಆಗುವ ಅವಕಾಶ ಖರ್ಗೆ ಅವರಿಗೆ ಮತ್ತೆ ತಪ್ಪಿತು. ಜೆಡಿಎಸ್​ನಲ್ಲಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. ಆದರೆ, ದೇವೇಗೌಡರು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟು ಕೊಟ್ಟರು. ಆಗ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಸಿದ್ದರಾಮಯ್ಯ ಅವರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದರು. ಧರಂಸಿಂಗ್ ಅವರನ್ನು ಬೆಂಬಲಿಸುವ ಈ ನಿರ್ಧಾರ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಬಿರುಕು ಮೂಡಿಸಿತು. ಕೊನೆಗೆ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿ ಸಂಘಟಿಸುವ ಮೂಲಕ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ತೊರೆಯುವುದರಲ್ಲಿ ಕೊನೆಗೊಂಡಿತು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಅವರಿಗೆ ಪ್ರತಿದಿನವೂ ಕಷ್ಟದ ದಿನವೇ ಆಗಿತ್ತು. ಅವರು ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷದ ಮತ್ತು ಜೆಡಿಎಸ್ ಪಕ್ಷದ ಶಾಸಕರ ಬೇಡಿಕೆಗಳನ್ನು ಈಡೇರಿಸಲೇಬೇಕಿತ್ತು. ಹೀಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಆಗದೇ ಇದ್ದ ಸಂದರ್ಭದಲ್ಲಿ ಹಲವು ಸಂಕಟಗಳನ್ನು ಅನುಭವಿಸಿದ್ದರು. ಆದರೆ, ಅದನ್ನು ಎಲ್ಲಿಯೂ ಬಾಯಿಬಿಟ್ಟು ಹೇಳಿಕೊಳ್ಳುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿನ ಸಂಕಟಗಳೇ ಧರಂಸಿಂಗ್ ನೇತೃತ್ವದ ಸರ್ಕಾರ ಪತನಗೊಳ್ಳಲು ಕಾರಣವಾದವು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಬಿಜೆಪಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಣಗಳು ನಡೆಸಿದ ಕ್ಷಿಪ್ರ ಕ್ರಾಂತಿಯಲ್ಲಿ ಧರಂಸಿಂಗ್ ಅವರು ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಕುಮಾರಸ್ವಾಮಿ ಜೊತೆಗೆ ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ ಹಾಗೂ ಜಮೀರ್ ಅಹ್ಮದ್ ಖಾನ್ ಅವರಂತಹ ಸಣ್ಣ ಪುಟ್ಟ ಶಾಸಕರು ಇದ್ದರೇ ಹೊರತು ಯಾವ ದೊಡ್ಡ ನಾಯಕರೂ ಇರಲಿಲ್ಲ. ಧರಂಸಿಂಗ್ ಅವರಿಗೆ ಇಂತಹ ಒಂದು ಕ್ರಾಂತಿಯ ಸುಳಿವು ಆಗೀಗ ಅಲ್ಪಸ್ಪಲ್ಪ ಸಿಕ್ಕಿದರೂ ದೇವೇಗೌಡರು ತಮ್ಮ ಜೊತೆಗೆ ಇರುವುದರಿಂದ ಕುಮಾರಸ್ವಾಮಿ ಅವರು ಸರ್ಕಾರ ಬೀಳಿಸುವುದಿಲ್ಲವೆಂಬ ನಂಬಿಕೆಯಲ್ಲಿದ್ದರು. ಧರಂಸಿಂಗ್ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಲಾಯಿತು. ಕೊನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಆಗ ಕುಮಾರಸ್ವಾಮಿಗೆ ದೇವೇಗೌಡರು ಬೆಂಬಲಿಸಿದರೇ ಅಥವಾ ಕುಮಾರಸ್ವಾಮಿ ಅವರು ಹಠ ಹಿಡಿದು ಬಿಜೆಪಿ ಜೊತೆ ಹೋದರೆ? ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

Intro:ಬೆಂಗಳೂರು : ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಸಾರಥ್ಯ ವಹಿಸಿದ್ದ ಮುಖ್ಯಮಂತ್ರಿ ಧರ್ಮಸಿಂಗ್, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿ ಆಡಳಿತ ನೀಡುತ್ತೇವೆ ಎಂದು ಹೇಳುತ್ತಲೇ ಒಂದೂವರೆ ವರ್ಷದಲ್ಲೇ ಅವಧಿಯಲ್ಲೇ ಸರ್ಕಾರ ಪತನವಾಯಿತು.Body:ಜೆಡಿಎಸ್ ಬೆಂಬಲ ವಾಪಸ್ ತೆಗೆದುಕೊಂಡಿದ್ದರಿಂದ ಧರ್ಮಸಿಂಗ್ ರಾಜೀನಾಮೆ ನೀಡಿದರು. ಮೊದಲ ಸಮ್ಮಿಶ್ರ ಸರ್ಕಾರದ ಅಲ್ಪಾವಧಿಯ ಏಳುಬೀಳುಗಳ ಚಿತ್ರಣ ಇಲ್ಲಿದೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಆನೇಕ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿದ್ದವು. ಆದರೆ, ಯಶಸ್ವಿಯಾಗಿ ಆಡಳಿತ ನಡೆಸಿರುವುದು ಬೆರಳೆಣಿಕೆಯಷ್ಟು ಮಾತ್ರ. ರಾಜ್ಯದಲ್ಲೂ ಸಹ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಹೊಂದಾಣಿಕೆ ಸ್ವಾಭಾವದ ಧರ್ಮಸಿಂಗ್ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಬಹುದು ಎಂಬ ನಿರೀಕ್ಷೆ ಹುಟ್ಟಿಸಿದ್ದರೂ ಸಿದ್ದರಾಮಯ್ಯನವರ ಪಕ್ಷಾಂತರ, ಕುಮಾರಸ್ವಾಮಿ ಅವರ ಅಧಿಕಾರದ ಲಾಲೆಸೆಗೆ ಧರ್ಮಸಿಂಗ್ ಸರ್ಕಾರ ಬಲಿಯಾಯಿತು.
ಸಮ್ಮಿಶ್ರ ಸರ್ಕಾರದ ವೈಫಲ್ಯಗಳು ನಿನ್ನೆ, ಮೊನ್ನೆಯದಲ್ಲ. ಈ ಹಿಂದೆಯೂ ನಡೆದಿದ್ದವು. ಸ್ವಲ್ಪ ಹಿಂದಿನ ಘಟನಾವಳಿಗಳನ್ನು ಗಮನಿಸಿದರೆ, 1983 ರಿಂದ 1985 ರವರೆಗೆ ದಿ. ರಾಮಕೃಷ್ಣ ಹೆಗಡೆ ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಮಧ್ಯಂತರ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ನೀಡಲು ಹೆಗಡೆಯವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ.
ಇನ್ನು 2004 ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿತು. ಅವರ ಸರ್ಕಾರದಲ್ಲಿ ಇದ್ದ 30 ಕ್ಕೂ ಹೆಚ್ಚು ಸಚಿವರೂ ಸಹ ಸೋಲು ಅನುಭವಿಸಿದರು. ಇಂತಹ ತೀವ್ರ ಆಡಳಿತ ವಿರೋಧಿ ಅಲೆಯ ನಡುವೆಯೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಅದು ಅತಂತ್ರ ಜನಾದೇಶವಾಗಿತ್ತು. ಬಿಜೆಪಿ ಅತಿ ಹೆಚ್ಚು ಅಂದರೆ 79 ಸೀಟುಗಳನ್ನು ಗೆದಿದ್ದರೆ ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಸ್ಥಾನಗಳನ್ನು ಪಡೆದಿದ್ದವು. ಹಾಗೆ ನೋಡಿದರೆ ಅದು ವಿರೋಧ ಪಕ್ಷಗಳಿಗೆ ಅಧಿಕಾರ ರಚಿಸಲು ಸಿಕ್ಕ ಜನಾದೇಶವಾಗಿತ್ತು. ಜಾತ್ಯಾತೀತ ತತ್ವಕ್ಕೆ ಕಟ್ಟುಬಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಜೆಪಿ ಜೊತೆಗೆ ಅಧಿಕಾರ ಮಾಡುವುದು ಸಾಧ್ಯವಿರಲಿಲ್ಲ.
ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಬಯಸಿದ್ದ ಕಾಂಗ್ರೆಸ್ ಗೆ ದೇವೇಗೌಡರ ಬೆಂಬಲದ ಇಂಗಿತ ವರದಾನವಾಗಿ ಬಂತು. ಆದರೆ, ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಸ್.ಎಂ. ಕೃಷ್ಣ ಅವರಿಗೇ ಹೆಚ್ಚು ಬೆಂಬಲ ಸಿಕ್ಕಿತು. 40 ಕ್ಕಿಂತ ಹೆಚ್ಚು ಶಾಸಕರು ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸಿದರು.
ಎಸ್.ಎಂ. ಕೃಷ್ಣ ಅವರು ದೇವೇಗೌಡರ ನಿವಾಸಕ್ಕೆ ತೆರಳೀ ತಾವು ಮತ್ತೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಬೇಕೆಂದು ನೆರವನ್ನು ಕೋರಿದ್ದರು. ಆದರೆ, ಮತ್ತೊಬ್ಬ ಒಕ್ಕಲಿಗ ನಾಯಕನಿಗೆ ಪಟ್ಟ ಕಟ್ಟಿ ತಾವು ಹಿನ್ನಡೆ ಅನುಭಸಲು ದೇವೇಗೌಡರು ಸಿದ್ದರಿರಲಿಲ್ಲ. ಹಾಗಾಗಿ, ಅವರ ಆಯ್ಕೆ ಧರ್ಮಸಿಂಗ್ ಅವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಧರ್ಮಸಿಂಗ್ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವ ಮನುಷ್ಯ ಎಂಬುದೂ ದೇವೇಗೌಡ ಲೆಕ್ಕಾಚಾರವಾಗಿತ್ತು. ಹಾಗಾಗಿ, ಅವರನ್ನು ಬೆಂಬಲಿಸಿದರು. ಮುಖ್ಯಮಂತ್ರಿ ಆಗುವ ಅವಕಾಶ ಖರ್ಗೆ ಅವರಿಗೆ ಮತ್ತೆ ತಪ್ಪಿತು.
ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ, ದೇವೇಗೌಡರು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟರು. ಆಗ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಮಾಡಲಾಯಿತು. ಆದರೆ, ಸಿದ್ದರಾಮಯ್ಯನವರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದರು. ಧರ್ಮಸಿಂಗ್ ಅವರನ್ನು ಬೆಂಬಲಿಸುವ ಈ ನಿರ್ಧಾರ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಬಿರುಕು ಮೂಡಿಸಿತು. ಕೊನೆಗೆ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿ ಸಂಘಟಿಸುವ ಮೂಲಕ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ತೊರೆಯುವುದರಲ್ಲಿ ಕೊನೆಗೊಂಡಿತು.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರಿಗೆ ಪ್ರತಿದಿನವೂ ಕಷ್ಟದ ದಿನವೇ ಆಗಿತ್ತು. ಅವರು ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷದ ಮತ್ತು ಜೆಡಿಎಸ್ ಪಕ್ಷದ ಶಾಸಕರ ಬೇಡಿಕೆಗಳನ್ನು ಈಡೇರಿಸಲೇ ಬೇಕಿತ್ತು. ಹೀಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಆಗದೇ ಇದ್ದ ಸಂದರ್ಭದಲ್ಲಿ ಹಲವು ಸಂಕಟಗಳನ್ನು ಅನುಭವಿಸಿದ್ದರು. ಆದರೆ, ಅದನ್ನು ಎಲ್ಲಿಯೂ ಬಾಯಿಬಿಟ್ಟು ಹೇಳಿಕೊಳ್ಳುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿನ ಸಂಕಟಗಳೇ ಧರ್ಮಸಿಂಗ್ ನೇತೃತ್ವದ ಸರ್ಕಾರ ಪತನಗೊಳ್ಳಲು ಕಾರಣವಾದುವು. ಬಿಜೆಪಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಣಗಳು ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಧರ್ಮಸಿಂಗ್ ಅವರು ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗ ಕುಮಾರಸ್ವಾಮಿ ಜೊತೆಗೆ ಚೆಲುವರಾಯಸ್ವಾಮಿ, ಬಾಲಕೃಷ್ಣ, ಪುಟ್ಟಣ್ಣ ಹಾಗೂ ಜಮೀರ್ ಅಹ್ಮದ್ ಖಾನ್ ಅವರಂಥ ಸಣ್ಣ ಪುಟ್ಟ ಶಾಸಕರು ಇದ್ದರೇ ಹೊರತು ಯಾವ ದೊಡ್ಡ ನಾಯಕರೂ ಇರಲಿಲ್ಲ. ಧರ್ಮಸಿಂಗ್ ಅವರಿಗೆ ಇಂಥ ಒಂದು ಕ್ರಾಂತಿಯ ಸುಳಿವು ಆಗೀಗ ಅಲ್ಪಸ್ಪಲ್ಪ ಸಿಕ್ಕಿದರೂ ದೇವೇಗೌಡರು ತಮ್ಮ ಜೊತೆಗೆ ಇರುವುದರಿಂದ ಕುಮಾರಸ್ವಾಮಿ ಅವರು ಸರ್ಕಾರ ಬೀಳಿಸುವುದಿಲ್ಲವೆಂಬ ನಂಬಿಕೆಯಲ್ಲಿದ್ದರು. ಧರ್ಮಸಿಂಗ್ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಲಾಯಿತು. ಕೊನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಆಗ ಕುಮಾರಸ್ವಾಮಿ ಅವರಿಗೆ ದೇವೇಗೌಡರು ಬೆಂಬಲಿಸಿದ್ದರೇ? ಅಥವಾ ಕುಮಾರಸ್ವಾಮಿ ಅವರು ಹಠ ಹಿಡಿದು ಬಿಜೆಪಿ ಜೊತೆ ಹೋದರೆ? ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.