ಬೆಂಗಳೂರು: ಸರ್ಕಾರಿ ಕೆಲಸ ನೇಮಕಾತಿ ವೇಳೆ ನಕಲಿ ಅಂಕ ಪಟ್ಟಿ ನೀಡಿದ ಆರೋಪ ಎದುರಿಸುತ್ತಿರುವ 64 ಸರ್ಕಾರಿ ನೌಕರರಿಗೆ ಅಸಲಿ ದಾಖಲಾತಿ ತೋರಿಸುವಂತೆ ಸಿದ್ದಾಪುರ ಪೊಲೀಸರು ನೊಟೀಸ್ ನೀಡಿದ್ದಾರೆ.
ನಕಲಿ ಮಾರ್ಕ್ಸ್ ಕಾರ್ಡ್ ಸಲ್ಲಿಸಿ ಕೆಲಸ ಪಡೆದಿದ್ದವರ ವಿರುದ್ಧ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿಗಳ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆಯಾ ಹುದ್ದೆಗೆ ಸಲ್ಲಿಸಲಾಗಿದ್ದ ಮೂಲ ದಾಖಲಾತಿಗಳನ್ನ ಹಾಜರುಪಡಿಸುವಂತೆ 64 ಆರೋಪಿಗಳಿಗೆ ನೋಟಿಸ್ ಜಾರಿಗೊಳಿಗೊಳಿಸಿದ್ದಾರೆ. ಮರು ಪರಿಶೀಲನೆಯಲ್ಲಿ ಸರ್ಕಾರಿ ನೌಕರರ ಅಕ್ರಮ ಬಯಲಾದರೆ ಕೆಲಸ ಕಳೆದುಕೊಳ್ಳಲಿದ್ದಾರೆ.
ಪ್ರಕರಣದ ಹಿನ್ನೆಲೆ :
ನಕಲಿ ಮಾರ್ಕ್ಕಾರ್ಡ್ ನೀಡಿ ಕೆಲಸಕ್ಕೆ ಸೇರಿದ ಬಗ್ಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗೆ ಪತ್ರಗಳು ಬಂದಿದ್ದವು. ಆರೋಪ ಬೆಳಕಿಗೆ ಬರುತ್ತಿದ್ದಂತೆ ಕಾರ್ಮಿಕ ಇಲಾಖೆಯು ಅಂಕಪಟ್ಟಿ ಪರಿಶೀಲನೆಗೆ ಸಮಿತಿ ರಚಿಸಿತ್ತು. ಅಂಕಪಟ್ಟಿಯ ಶಿಕ್ಷಣ ಸಮಿತಿಯ ಹಾಜರಾತಿ ಪರಿಶೀಲನೆಯಲ್ಲಿ ಅಕ್ರಮ ಪತ್ತೆಯಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಆರೋಪಿಗಳು ಕೆಲಸ ಗಿಟ್ಟಿಸಿಕೊಂಡಿರಿವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತಿದ್ದಂತೆ ಕೈಗಾರಿಕಾ ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಇದೇ ತಿಂಗಳ 4ರಂದು 64ಕ್ಕೂ ಹೆಚ್ಚು ಸರ್ಕಾರಿ ನೌಕರರ ವಿರುದ್ಧ ಸಿದ್ದಾಪುರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 419 - ಸರ್ಕಾರಿ ಹುದ್ದೆಗೆ ವಂಚನೆ, 468 - ವಂಚನೆ ಉದ್ದೇಶದಿಂದ ನಕಲು ಮಾಡುವುದು, 420 - ವಂಚನೆ 471 - ನಕಲಿ ದಾಖಲೆಗಳನ್ನ ಅಸಲೆಂದು ಸಲ್ಲಿಕೆ, ಮತ್ತು ಅಂಡರ್ ಸೆಕ್ಷನ್ 34 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.