ETV Bharat / state

ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಮಂಡ್ಯ ನಾಯಕರ ಸಭೆ ವಿಫಲ

ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ನಡೆದಿದ್ದು, ನಮ್ಮ ಮೇಲೆ ಸಿದ್ದರಾಮಯ್ಯ ಡಿಪೆಂಡ್ ಆಗಿದ್ದರೆ. ನಾವು ನಮ್ಮ ಪಕ್ಷದ ಬೆನ್ನೆಲುಬಾದ ಕಾರ್ಯಕರ್ತರನ್ನು ಡಿಪೆಂಡ್ ಆಗಿದ್ದೇವೆ. ಅವರೆಲ್ಲರ ಜೊತೆ ಮಾತನಾಡಿ ತೀರ್ಮಾನಕ್ಕೆ ಬರ್ತೀವಿ ಎಂದು ಚೆಲುವರಾಯಸ್ವಾಮಿ ತಿಳಿಸಿದರು.

author img

By

Published : Apr 7, 2019, 11:15 PM IST

ಸಿದ್ದರಾಮಯ್ಯ ನಿವಾಸದಲ್ಲಿ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಂಡ್ಯ ಕಾಂಗ್ರೆಸ್ ನಾಯಕರ ಭೋಜನದ ಜತೆ ನಡೆದ ಇನ್ನೊಂದು ಹಂತದ ಸಭೆ ಕೂಡ ವಿಫಲವಾಗಿದೆ.

ಮಂಡ್ಯ ಕಾಂಗ್ರೆಸ್ ಮುಖಂಡರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ರವಿ ಗಾಣಿಗ ಸೇರಿ ಇತರೆ ಮುಖಂಡರು ಭಾಗಿಯಾಗಿದ್ದರು. ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹ್ಮದ್ ಖಾನ್ ಪಾಲ್ಗೊಂಡಿದ್ದರು.

ಮಂಡ್ಯ ಮುಖಂಡರ ಜೊತೆ ಸಭೆಯಲ್ಲಿ ಒಮ್ಮತ ಮೂಡಿಲ್ಲ. ನಾಳೆ ಮತ್ತೊಂದು ಸಭೆ ನಡೆಸಲು ನಿರ್ಧಾರ ಕೈಗೊಳ‍್ಳಲಾಗಿದೆ. ಸಿದ್ದರಾಮಯ್ಯ ಮಾತಿಗೆ ಮಣಿಯದ ಮಂಡ್ಯ ಕೈ ಅಸಮಾಧಾನಿತರು ಪದೇಪದೆ ಸಿಎಂ ನಮ್ಮನ್ನ ಟಾರ್ಗೆಟ್ ಮಾಡ್ತಾರೆ. ಬೆನ್ನಿಗೆ ಚೂರಿ ಹಾಕುವವರು ಅಂತಾ ಹೇಳ್ತಾರೆ. ನಾವು ಯಾವ ಮುಖವಿಟ್ಟುಕೊಂಡು ಕೆಲಸ ಮಾಡಬೇಕು. ನಮ್ಮನ್ನ ಪದೇಪದೆ ಹೀಗೆ ಅವಮಾನಿಸಿದರೆ ಹೇಗೆ? ಅವರಿಗೆ ನಮ್ಮ ಮೇಲೆ ನಂಬಿಕೆಯಿಲ್ಲವಾಗಿದೆ. ನಾವು ಮೇಲೆ ಬಿದ್ದು ಯಾಕೆ ಪ್ರಚಾರ ಮಾಡಬೇಕು. ಈಗ ಕಷ್ಟಪಟ್ಟು ಕೆಲಸ ಮಾಡ್ತೇವೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮನ್ನ ಪರಿಗಣಿಸ್ತಾರಾ? ಅವರು ನಮ್ಮ ಪರವಾಗಿಯೇನೂ ಕೆಲಸ ಮಾಡಿಲ್ಲ. ಜನ ನಮ್ಮನ್ನ ಆರಿಸಿ ಕಳಿಸಿದ್ದಾರೆ ಅಂತಾ ಗೂಬೆ ಕೂರಿಸ್ತಾರೆ. ಇದಕ್ಕೆ ನಾವೇಕೆ ಕೆಲಸ ಮಾಡಬೇಕು ಎಂಬ ಅಸಮಾಧಾನವನ್ನ ಮಂಡ್ಯ ಕೈ ನಾಯಕರ ಪರವಾಗಿ ಸಿದ್ದರಾಮಯ್ಯ ಮುಂದೆ ಚೆಲುವರಾಯಸ್ವಾಮಿ ವ್ಯಕ್ತಪಡಿಸಿದರು.

ಕಾಂಗ್ರೆಸ್​ ರಾಜ್ಯದಲ್ಲಿ ಹೆಚ್ಚು ಸೀಟು ಗೆಲ್ಲಬೇಕಿದೆ. ಎಲ್ಲ ಕಡೆ ಗೆಲ್ಲುವ ಉತ್ತಮ ಅವಕಾಶವಿದೆ. ಹೈಕಮಾಂಡ್ ಸೂಚನೆಯನ್ನ ನಾವು ಪಾಲಿಸಲೇಬೇಕಿದೆ. ಹೀಗಾಗಿ ನೀವು ತಾಳ್ಮೆಯಿಂದ ವರ್ತಿಸಿ. ನಿಮ್ಮನ್ನ ಸರಿಯಾಗಿ ನಡೆಸಿಕೊಳ್ತೇವೆ. ಸಿಎಂ ಜೊತೆಯೂ ನಾನು ಮಾತುಕತೆ ನಡೆಸುತ್ತೇನೆ ಎಂದು ಪದೇಪದೆ ಸಿದ್ದು ಕಿವಿಮಾತು ಹೇಳಿದರು. ಸಿದ್ದು ಮಾತಿಗೆ ಮತ್ತೆ ಭಿನ್ನ ಉತ್ತರ ಮೂಡಿಬಂತು. ಹೀಗಾಗಿ ಈಗ ಊಟ ಮಾಡಿ ನಾಳೆ ಮತ್ತೆ ಸಭೆ ನಡೆಸೋಣ ಎಂದ ಸಿದ್ದರಾಮಯ್ಯ, ಎಲ್ಲರಿಗೂ ಹಬ್ಬದ ಅಡುಗೆ ಮಾಡಿಸಿ ಊಟ ಮಾಡಿಸಿ ಕಳುಹಿಸಿದ್ದಾರೆ.

ಪಕ್ಷಕ್ಕೆ ಸೀಮಿತವಾದ ಸಭೆ:

ಚೆಲುವರಾಯಸ್ವಾಮಿ ಮಾತನಾಡಿ, ಇದು ನಮ್ಮ ಪಕ್ಷಕ್ಕೆ ಸೀಮಿತವಾದ ಸಭೆ. ಪಕ್ಷದ ಅಧ್ಯಕ್ಷರು, ಸಿದ್ದರಾಮಯ್ಯ ಎಂಟು ಕ್ಷೇತ್ರದ ಮುಖಂಡರ ಸಭೆ ಕರೆದಿದ್ದರು. ನಮ್ಮ ಮೇಲೆ ಸಿದ್ದರಾಮಯ್ಯ ಡಿಪೆಂಡ್ ಆಗಿದ್ದರೆ. ನಾವು ನಮ್ಮ ಪಕ್ಷದ ಬೆನ್ನೆಲುಬಾದ ಕಾರ್ಯಕರ್ತರನ್ನು ಡಿಪೆಂಡ್ ಆಗಿದ್ದೇವೆ. ಅವರೆಲ್ಲರ ಜೊತೆ ಮಾತನಾಡಿ ತೀರ್ಮಾನಕ್ಕೆ ಬರ್ತೀವಿ ಅಂದಿದ್ದೇವೆ. ಮತ್ತೆ ಸಭೆ ನಡೆಸೋದಕ್ಕೆ ಸಮಯ ಇಲ್ಲ. ಮಂಡ್ಯ ವಿಚಾರದಲ್ಲಿ ಕುಮಾರಸ್ವಾಮಿ ಸೂಕ್ಷ್ಮವಾಗಿ ಹೇಳಬಹುದು. ಮಂಡ್ಯ ವಿಚಾರವಾಗಿ ಜನರ ತೀರ್ಮಾನಕ್ಕೆ ಬಿಟ್ಟು ಬಿಡೋಣ ಅಂತಾ ಹೇಳಬಹುದು. ಉಳಿದ ಕ್ಷೇತ್ರದಲ್ಲಿ ಮೈತ್ರಿಯಾಗಿ ಹೋಗೋಣ ಅಂತಾ ನಾನು ಹೇಳಿದ್ದೆ. ನಮ್ಮ ಕಾರ್ಯಕರ್ತರನ್ನು ಕೇಳದೆ ನಾವು ಯಾವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಏನು ಸೂಚನೆ ಕೊಟ್ಟಿದ್ದಾರೆ ಈ ಬಗ್ಗೆ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಚುನಾವಣಾ ಪ್ರಚಾರ ನಡೆಸೋ ಅವಶ್ಯಕತೆ ಇದೆಯಾ, ಇಲ್ಲವೋ ನೋಡೋಣ ಎಂದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.