ETV Bharat / state

ಲೋಕಸಭಾ ಚುನಾವಣೆ: ಬೆಂಗಳೂರಿನ ಸೂಕ್ಷ್ಮ ಮತಗಟ್ಟೆಗಳ ಮೇಲೆ ಖಾಕಿ ಕಣ್ಗಾವಲು

ಬೆಂಗಳೂರಿನ ಸೂಕ್ಷ, ಸಾಧಾರಣ ಮತಗಟ್ಟೆಗಳ ವಿಂಗಡಣೆ. ಸೂಕ್ಷ್ಮ ಮತಗಟ್ಟೆಗಳ ಮೇಲೆ ಖಾಕಿ ಕಣ್ಗಾವಲು. ಭದ್ರತೆಗಾಗಿ ಹೆಚ್ಚಿನ ಕ್ರಮ.

ಮತಗಟ್ಟೆ (ಸಂಗ್ರಹ ಚಿತ್ರ)
author img

By

Published : Apr 10, 2019, 6:34 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ನಗರದಲ್ಲಿನ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು, ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಬೆಂಗಳೂರು ದಕ್ಷಿಣ, ಬೆಂ. ಉತ್ತರ, ಬೆಂ. ಕೇಂದ್ರ, ಬೆಂ. ಗ್ರಾಮಾಂತರದಲ್ಲಿ ‌ಮತದಾನ ನಡೆಯುತ್ತವೆ‌. ಈ ಪ್ರದೇಶದಲ್ಲಿ ಒಟ್ಟು 7,577 ಮತಗಟ್ಟೆಗಳಿದ್ದು, ಅದರಲ್ಲಿ 1,403 ಸೂಕ್ಷ ಹಾಗೂ 6,174 ಸಾಧಾರಣ ಮತಗಟ್ಟೆಗಳೆಂದು ವಿಂಗಡನೆ ಮಾಡಿ, ಭದ್ರತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಒಂದೊಂದು ಮತಗಟ್ಟೆಗಳಲ್ಲಿ ಒಬ್ಬ ಹೆಡ್ ಕಾನ್​ಸ್ಟೇಬಲ್​, ಕಾನ್​ಸ್ಟೇಬಲ್​ಗಳನ್ನ ನೇಮಿಸಿದ್ದು, ಸೂಕ್ಷ ಮತಗಟ್ಟೆ ಪ್ರದೇಶಗಳಲ್ಲಿ ಕಾನ್​ಸ್ಟೇಬಲ್​ ಜೊತೆ ಹಿರಿಯ ಅಧಿಕಾರಿಗಳ ಕಣ್ಗಾವಲೂ ಇರಲಿದೆ. ಸೂಕ್ಷ ಮತಗಟ್ಟೆಗಳ ಬಳಿ ಸಿಸಿಟಿವಿ ಅಳವಡಿಸಿ, ಪೊಲೀಸರು ಗಸ್ತು ತಿರುಗಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ‌ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಅವರೂ ಮತದಾನದ ಎಲ್ಲ ವಿಧಿ ವಿಧಾನಗಳನ್ನ ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಯಾರಾದರೂ ‌ಮತಗಟ್ಟೆಗಳ ಸುತ್ತಮುತ್ತ ಅನುಮಾನಾಸ್ಪದವಾಗಿ ‌ಓಡಾಡುವುದು ಅಥವಾ ಎಲೆಕ್ಷನ್ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಳ್ಳುವುದು ಕಂಡು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್​ ತಿಳಿಸಿದ್ದಾರೆ.

ಈಗಾಗಲೇ ಈ ಹಿಂದೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಮತಗಟ್ಟೆಗಳಲ್ಲಿ ಜರುಗಿದ ಘಟನೆಗಳ ಪಟ್ಟಿಯನ್ನೂ ಪೊಲೀಸರು ತಯಾರಿಸಿದ್ದು, ಆಯಾ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಬೆಂ.ದಕ್ಷಿಣ ಮತ್ತು ಕೇ‌ಂದ್ರ ಭಾಗದಲ್ಲೇ ಅತಿ ಹೆಚ್ಚು ಸೂಕ್ಷ ಮತಗಟ್ಟೆಗಳಿವೆ ಎಂಬುದನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ಖಾಕಿ ಕಣ್ಗಾವಲು ಇರಲಿದೆ.

Intro:ಭವ್ಯ

editorial story

ನಗರದಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳು ಯಾವುದುಗೊತ್ತ.. ಇವುಗಳ ಭದ್ರತೆಗೆ ಪೊಲೀಸರು ಕೈಗೊಂಡಿರುವ ಕ್ರಮ

ಲೋಕಸಭಾ ಚುನಾವಣಾ ಪ್ರಯುಕ್ತ ಈಗಾಗ್ಲೆ ಪೊಲೀಸರು ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಅದ್ರಲ್ಲು ಲೋಕಸಭೆಗೆ ಪ್ರಮುಖ ಪಾತ್ರವಹಿಸುವುದು ಎಲೆಕ್ಷನ್ ನಡೆಯುವ ಮತಗಟ್ಟೆಗಳು.

ಮತಗಟ್ಟೆಯಲ್ಲೆ ಏನೆ ತೊಂದರೆಯಾದ್ರು ಅದು ಲೋಕಸಭೆ ಎಲೆಕ್ಷನ್ ನಿಂತಿರುವ ಅಭ್ಯರ್ಥಿಗಳಿಗೆ ಲಾಭನು ಆಗಬಹುದು ಅಥವಾ ಅನ್ಯಾಯನು ಅಗಬಹುದು. ಹಾಗಾಗಿ ಈಗಾಗ್ಲೆ ಮತಗಟ್ಟೆಗಳ‌ಮೇಲೆ ಖಾಕಿ ಹಾಗೂ ಚುನಾವಣಾಧಿಕಾರಿಗಳು ಕಣ್ಣು ಇಟ್ಟಿದ್ದಾರೆ.. ಈಗಾಗ್ಲೇ ಬೆಂಗಳೂರಿನಲ್ಲಿ ಎರಡನೇ ಹಂತದ ಮತದಾನ ನಡೆಯಲಿದ್ದು ಬೆಂಗಳೂರು ದಕ್ಷಿಣಾ, ಬೆಂಗಳೂರು ಉತ್ತರ, ಬೆಂಗಳೂರುಕೇಂದ್ರ,ಬೆಂಗಳೂರುಗ್ರಾಮಾಂತರದಲ್ಲಿ‌ಮತದಾನ ನಡೆಯುತ್ತವೆ‌ ..

ಈಗಾಗ್ಲೇ ಈ ಪ್ರದೇಶದಲ್ಲಿ ಒಟ್ಟು7577ಮತಗಟ್ಟೆಗಳು ಇದ್ದು ಅದ್ರಲ್ಲಿ 1403ನತಗಟ್ಟೆಗಳನ್ನ ಸೂಕ್ಷ ಹಾಗೂ 6174ಮತಗಟ್ಟೆಗಳನ್ನ ಸಾಧಾರಣ ಮತಗಟ್ಟೆಗಳಾಗಿ ವಿಂಗಡನೆ ಮಾಡಿ ಈ ಪ್ರದೇಶದಲ್ಲಿ ಖಾಕಿ ಹೆಚ್ಚಿನ ರೀತಿಯ ಕಣ್ಗಾವಲು ಇಟ್ಟಿದೆ..

ಒಂದೊದು ಮತಗಟ್ಟೆಗಳಲ್ಲಿ ಒಬ್ಬ ಹೆಡ್ ಕಾನ್ಸ್ಟೇಬ ಲ್, ಕಾ
ನ್ಸ್ಟೇಬಲ್ ಹಾಗೆ ಹಿರಿಯ ಅಧಿಕಾರಿಗಳು ಸೂಕ್ಷ ಪ್ರದೇಶಗಳ ಮೇಲೆ ಕಣ್ಗಾವಲು ಇಡಲಿದ್ದಾರೆ.. ಸೂಕ್ಷ ಮತಗಟ್ಟೆಗಳನ್ನ ಈಗಾಗ್ಲೇ ಹಿರಿಯ ಪೊಲಿಸ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಮತಗಟ್ಟೆ ಗಳನ್ನ ಗುರುತು ಮಾಡಿದ್ದು ಆ ಮತಗಟ್ಟೆಗಳಿಗೆ ಸಿಸಿಟಿವಿ ಅಳವಡಿಸಿ ಪೊಲಿಸರು ಗಸ್ತು ತಿರುಗಲಿದ್ದಾರೆ..

ಹಾಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ‌ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದು ಅವ್ರು ಎಲ್ಲಾ ಮತದಾನದ ವಿಧಿ ವಿಧಾನಗಳನ್ನ ತಿಳಿದುಕೊಳ್ಳಬೇಕು. ಒಂದು ವೇಳೆ ಯಾರಾದ್ರು‌ಮತಗಟ್ಟೆಗಳ ಸುತ್ತಾ ಮುತ್ತಾ ಅನುಮಾನ ಸ್ಪದವಾಗಿ‌ಓಡಾಡುವುದು ಅಥವಾ ಎಲೆಕ್ಷನ್ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರು ತಿಳಿಸಿದ್ದಾರೆ..
ಇದಕ್ಕಿಂತ ಮುಂಚೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಎಲೆಕ್ಸನ್ ನಡೆದ ‌ ಮತಗಟ್ಟೆಗಳ ಸೂಕ್ಷ ಹಾಗೂ ಸಾಧರಣ ಮತಗಟ್ಟೆಗಳಲ್ಲಿ ನಡೆದ ಘಟನೆ ಗಳ ಪಟ್ಟಿಯನ್ನ ಕೂಡ ಪೊಲೀಸರು ರೆಡಿ ಮಾಡಿದ್ದು ಹಾಗಾಗಿ ಅಲ್ಲಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ.
ದಕ್ಷಿಣಾ ಮತ್ತು ಕೇ‌ದ್ರ ಭಾಗದ ಮತಗಟ್ಟೆಗಳನ್ನ ಹೆಚ್ಚು ಸೂಕ್ಷ ಮತಗಟ್ಟೆಗಳೆಂದು ಪೊಲೀಸರು ‌ಗುರುತಿಸಿದ್ದಾರೆ. ಹಾಗಾಗಿ ಮತಗಟ್ಟೆಗಳ‌ಮೇಲೆ ಖಾಕಿ ಕಣ್ಗಾವಲು ಇಡಲಾಗಿದೆ

Body:ಭವ್ಯ

editorial story

ನಗರದಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳು ಯಾವುದುಗೊತ್ತ.. ಇವುಗಳ ಭದ್ರತೆಗೆ ಪೊಲೀಸರು ಕೈಗೊಂಡಿರುವ ಕ್ರಮ

Conclusion:ಭವ್ಯ

editorial story

ನಗರದಲ್ಲಿ ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳು ಯಾವುದುಗೊತ್ತ.. ಇವುಗಳ ಭದ್ರತೆಗೆ ಪೊಲೀಸರು ಕೈಗೊಂಡಿರುವ ಕ್ರಮ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.