ETV Bharat / state

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೆಎಸ್​ಆರ್​ಟಿಸಿ: ಮತ್ತೊಂದು ನೂತನ ಸೇವೆ ಆರಂಭ - ಟ್ರಾವೆಲ್ ವಿತ್ ಡ್ರೀಮ್

ಮೊದಲ ಬಾರಿಗೆ ವೋಲ್ವೋದಲ್ಲಿ ಹೊಸ ಸೇವೆ ಪರಿಚಯಿಸಿದ ಕೆಎಸ್ಆರ್‌ಟಿಸಿ - ಟ್ರಾವೆಲ್ ವಿತ್ ಡ್ರೀಮ್ ಎನ್ನುವ ಟ್ಯಾಗ್​ ಲೈನ್​ನೊಂದಿಗೆ ಸ್ಲೀಪರ್​ ಸೇವೆ- ಬೆಂಗಳೂರು ಟು ವಿಜಯವಾಡ, ಪುಣೆ, ಸಿಕಂದರಾಬಾದ್ ನಡುವೆ ಆರಂಭಿಕ‌ ಹಂತವಾಗಿ ಬಸ್​ಗಳ ಸಂಚಾರ ಆರಂಭ

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೆಎಸ್​ಆರ್​ಟಿಸಿ
author img

By

Published : Apr 24, 2019, 12:14 PM IST

Updated : Apr 24, 2019, 3:51 PM IST

ಬೆಂಗಳೂರು: ದೇಶದ ಸರ್ಕಾರಿ ರಸ್ತೆ ಸಾರಿಗೆ ನಿಯಮಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ಹೊಸ ಹೊಸ ಸೇವೆಗಳನ್ನು ಮೊದಲೇ ಪರಿಚಯ ಮಾಡುವಲ್ಲಿ ಹೆಸರು ಮಾಡಿರುವ ಕೆಎಸ್ಆರ್‌ಟಿಸಿಯು ಸ್ಲೀಪ್ ಲೈಕ್ ಎ ಬೇಬಿ ನಂತರ ಟ್ರಾವೆಲ್ ವಿತ್ ಡ್ರೀಮ್ ಎನ್ನುತ್ತಿದೆ. ಸಾರಿಗೆ ಸಂಸ್ಥೆಯ ಈ ಹೊಸ ಸೇವೆಗೆ ಪ್ರಯಾಣಿಕರಂತೂ ಫುಲ್ ಖುಷ್​ ಆಗಿದ್ದಾರೆ.

ಹೌದು, ಪ್ರೀಮಿಯಂ ಸಾರಿಗೆ ಸೇವಾ ವಿಭಾಗದಲ್ಲಿ ಈಗಾಗಲೇ ಕೆಎಸ್ಆರ್‌ಟಿಸಿ ಡೀಲಕ್ಸ್, ವೋಲ್ವೋ ಸೆಮಿ ಸ್ಲೀಪರ್, ಕರೋನ ಸ್ಲೀಪರ್​ ಸೀಟ್​ಗಳ ಸೇವೆ ಒದಗಿಸುತ್ತಿವೆ. ಇದೇ ಮೊದಲ ಬಾರಿಗೆ ವೋಲ್ವೋದಲ್ಲಿ ಸ್ಲೀಪರ್ ಸೇವೆಯನ್ನು ಪರಿಚಯಿಸಿದೆ. ಈವರೆಗೂ ವೋಲ್ವೋ ಮತ್ತು ಸ್ಕ್ಯಾನಿಯಾ ಕಂಪನಿಯ ಮಲ್ಟಿ ಆ್ಯಕ್ಸಲ್ ಬಸ್​ಗಳೇ ಸಾರಿಗೆ ನಿಗಮದ ಅತ್ಯಂತ ಐಷಾರಾಮಿ ಬಸ್​ಗಳಾಗಿದ್ದು, ಸ್ಲೀಪ್‌ ಲೈಕ್ ಎ ಬೇಬಿ ಟ್ಯಾಗ್ ಲೈನ್​ನೊಂದಿಗೆ ಈ ಬಸ್​ಗಳ ಸೇವೆ ಒದಗಿಸಲಾಗುತ್ತಿದೆ.

ಈಗ ಇದೇ ಸರಣಿಯ ಮುಂದುವರೆದ ಭಾಗ ಎನ್ನುವಂತೆ ವೋಲ್ವೋ ಮಲ್ಟಿ ಆ್ಯಕ್ಸಲ್ ಬಸ್​ಗಳಲ್ಲಿ ಸ್ಲೀಪರ್ ಸೇವೆಯನ್ನು ಪರಿಚಯಿಸಿದೆ. ಈಗಾಗಲೇ ಸ್ಲೀಪರ್ ಸೇವೆ ಒದಗಿಸುತ್ತಿರುವ ಕರೋನಾ ಬಸ್​​ಗಳಿಗೆ ಇಡಲಾಗಿರುವ ಅಂಬಾರಿ ಹೆಸರನ್ನೇ ಇದಕ್ಕೂ ಬಳಸಿದ್ದು ಅಂಬಾರಿ ಡ್ರೀಮ್‌ಕ್ಲಾಸ್ ಎಂದು ಹೆಸರಿಡಲಾಗಿದೆ. ಜೊತೆಗೆ ಇದಕ್ಕೆ ಕನಸಿನೊಂದಿಗೆ ಪ್ರಯಾಣಿಸಿ(ಟ್ರಾವೆಲ್ ವಿತ್ ಡ್ರೀಮ್) ಎನ್ನುವ ಟ್ಯಾಗ್ ಲೈನ್ ಬಳಸಿ ಪ್ರಯಾಣಿಕರನ್ನು ಮತ್ತಷ್ಟು ಆಕರ್ಷಿಸಲಾಗುತ್ತಿದೆ.

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೆಎಸ್​ಆರ್​ಟಿಸಿ

ಮಲ್ಟಿ ಆ್ಯಕ್ಸಲ್ ಆಗಿರುವ ಕಾರಣ ಎಂತಹ ರಸ್ತೆಯಲ್ಲಿಯೂ ಬಸ್ ಅಲ್ಲಾಡುವುದಿಲ್ಲ ಜೊತೆಗೆ ಬಸ್​ನ ಇಂಜಿನ್ ಸದ್ದು ಕೂಡ ಬಸ್ಸೊಳಿಗಿನ ಪ್ರಯಾಣಿಕರಿಗೆ ಕೇಳಿಸುವುದಿಲ್ಲ. ಒಂದು ರೀತಿಯಲ್ಲಿ ಮನೆಯಲ್ಲಿ‌ ಮಲಗಿದ ಅನುಭವ ನೀಡುತ್ತದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ.

ಸೋಮವಾರದಿಂದ ಅಂಬಾರಿ ಡ್ರೀಮ್ ಕ್ಲಾಸ್ ಬಸ್​ಗಳನ್ನು ರಸ್ತೆಗಿಳಿಸಲಾಗಿದೆ. ಬೆಂಗಳೂರು-ವಿಜಯವಾಡ, ಬೆಂಗಳೂರು-ಪೂಣೆ, ಬೆಂಗಳೂರು- ಸಿಕಂದರಾಬಾದ್ ನಡುವೆ ಆರಂಭಿಕ‌ ಹಂತವಾಗಿ ಈ ಬಸ್​ಗಳ ಸಂಚಾರ ಆರಂಭಿಸಲಾಗಿದೆ. ಮೂರು ಮಾರ್ಗಗಳಲ್ಲಿ ಸದ್ಯ ಆರು ಬಸ್​ಗಳು ಸಂಚರಿಸುತ್ತಿದ್ದು, ಸದ್ಯದಲ್ಲೇ ಮತ್ತಷ್ಟು ಮಾರ್ಗಕ್ಕೂ ಈ ಬಸ್​ಗಳ ಸೇವೆ ವಿಸ್ತರಣೆಯಾಗಲಿದೆ.

ಇನ್ನು ಪ್ರಯಾಣಿಕರಂತೂ ಈ ಬಸ್​ನಲ್ಲಿ ಸಂಚರಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬಸ್​ನ ಐಷಾರಾಮಿ ಹಾಗು ಸಸ್ಪೆನ್ಷನ್​ಗೆ ಫುಲ್ ಫಿದಾ ಆಗಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಪ್ರತಿ ವಾರ ಹೈದರಾಬಾದ್​ಗೆ ಪ್ರಯಾಣ ಮಾಡುತ್ತಿದ್ದೇನೆ. ಕೆಎಸ್ಆರ್​ಟಿಸಿ ಬಸ್​ನಲ್ಲೇ ಸಂಚರಿಸುತ್ತಿದ್ದೇನೆ. ಸ್ಲೀಪರ್, ಓಲ್ವೋದಲ್ಲಿ ಪ್ರಯಾಣ ಮಾಡಿದ್ದೆ‌ ಆದರೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಪ್ರಯಾಣ ಅದ್ಭುತ ಅನುಭವ ನೀಡಿದೆ. ಸ್ಪೇಸ್ ಚೆನ್ನಾಗಿದೆ, ಸಸ್ಪೆನ್ಷನ್ ಕೂಡ ಅದ್ಭುತ. ಈ ಬಸ್​ನಲ್ಲಿ ಪ್ರಯಾಣಿಸಲು ತುಂಬಾ ಖುಷಿಯಾಗುತ್ತದೆ ಎಂದು ಬಸ್ ಪ್ರಯಾಣದ ಸಂತಸವನ್ನು ಪ್ರಯಾಣಿಕ ಶ್ರೀಧರ್ ಎಂಬುವರು ಹಂಚಿಕೊಂಡಿದ್ದಾರೆ.

ಬಸ್ ನ ಚಾಲಕ ಶಂಕರ್ ಮಾತನಾಡಿ, ಬೇರೆ ಬಸ್​ಗಿಂತ ಈ ಬಸ್ ಸೂಪರ್ ಆಗಿದೆ, ಆಟೋ ಟ್ರಾನ್ಸ್ಮಿಷನ್ ಇದ್ದು, ಓಡಿಸಲು ತುಂಬಾ ಚೆನ್ನಾಗಿದೆ. ಎಲ್ಲಾ ವರ್ಗದ ಪ್ರಯಾಣಿಕರಿಗೂ ಈ ಬಸ್ ಅನುಕೂಲ ಆಗಿದೆ, ಈ ಬಸ್ ಡ್ರೈವಿಂಗ್ ಮಾಡಲು‌ ಖುಷಿಯಾಗುತ್ತಿದೆ ಎಂದರು.

ಒಟ್ಟಿನಲ್ಲಿ ಸ್ಲೀಪ್ ಲೈಕ್ ಎ ಬೇಬಿ ಎನ್ನುತ್ತಿದ್ದ ಕೆಎಸ್ಆರ್‌ಟಿಸಿ ಇದೀಗ ಟ್ರಾವೆಲ್ ವಿತ್ ಡ್ರೀಮ್ ಅಂತಿದೆ. ಸದ್ಯದಲ್ಲೇ ರಾಜ್ಯದ ಎಲ್ಲಾ ಪ್ರಮುಖ ಮಾರ್ಗಗಳಲ್ಲಿಯೂ ಕನಸಿನೊಂದಿಗೆ‌ ಪ್ರಯಾಣಿಸಿ ಎನ್ನಲು ಸಿದ್ಧತೆ ನಡೆಸುತ್ತಿದೆ. ಕೆಎಸ್ಆರ್‌ಟಿಸಿಯ ಹತ್ತು ಹಲವು ಮೊದಲುಗಳ ಪಟ್ಟಿಗೆ ಇದೀಗ ಅಂಬಾರಿ ಡ್ರೀಮ್ ಕ್ಲಾಸ್ ಹೊಸ ಸೇರ್ಪಡೆಯಾಗಿದೆ.

Last Updated : Apr 24, 2019, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.