ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇಡಿ (ಜಾರಿ ನಿರ್ದೇಶನಾಲಯ), ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ನಾಪತ್ತೆಯಾಗಿರುವ ಮಾಲೀಕ ಮೊಹಮದ್ ಮನ್ಸೂರ್ ಖಾನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈಗಾಗಲೇ ಪೊಲೀಸರಿಗೆ ಆತ ದುಬೈನಲ್ಲಿ ತನ್ನ ಇಬ್ಬರು ಪತ್ನಿಯರ ಜೊತೆ ಇರುವ ಮಾಹಿತಿ ಸಿಕ್ಕಿದೆ. ಆತನನ್ನ ಭಾರತಕ್ಕೆ ತರಬೇಕಾದರೆ ಕೆಲವೊಂದು ನಿಯಮಗಳನ್ನ ಅನುಸರಿಸಬೇಕಾಗುತ್ತೆ. ಹೀಗಾಗಿ ನಗರ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿದ್ಧತೆ ಮಾಡಿದ್ದು, ಇದಕ್ಕೆ ನಿನ್ನೆ ಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ.
ಹಾಗೆಯೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಈಗಾಗಲೇ ಪ್ರಕರಣದ ಮಾಹಿತಿಯನ್ನ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಪೊಲೀಸರಿಗೆ ನೀಡಿದ್ದಾರೆ. ಇನ್ನು ನಗರ ಪೊಲೀಸರು ಇಂಟರ್ ಪೋಲ್ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಅವರ ಮುಖಾಂತರ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಲಿದ್ದಾರೆ.