ಬೆಂಗಳೂರು: ಸರ್ಕಾರದಲ್ಲಿ ನಾವಂದುಕೊಂಡಂತೆ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇರುವುದು ನಿಜ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ರಾಜೀನಾಮೆ ನೀಡಿದ್ದೇನೆ: ರಾಜೀನಾಮೆ ಕೊಟ್ಟ ನಂತರ ಸಚಿವ ಸ್ಥಾನವನ್ನು ಮತ್ತೊಮ್ಮೆ ಕೇಳುವುದು ಬಿಡುವುದು ನಮ್ಮ ಹಕ್ಕು. ಕೊಡುವುದು ಪಕ್ಷಕ್ಕೆ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಆಪರೇಷನ್ ಮಾಡಲು ಬಿಜೆಪಿಯವರು ರೆಡಿ ಇದ್ದಾರೆ. ಆದರೆ ಎಂಟಿಬಿ ನಾಗರಾಜ್ ಪೇಷೆಂಟ್ ಅಲ್ಲ. ನಾನು ಹೆಲ್ದೀ ಮ್ಯಾನ್. ನಾನು ಬಿಜೆಪಿಗೆ ಹೋಗುವುದಿಲ್ಲ ಅನ್ನೋದು ಗ್ಯಾರಂಟಿ. ಕಾಂಗ್ರೆಸ್ನಿಂದ ಬಿಜೆಪಿಗೆ ಬರುವವರಿಗೆ ರಿಲೀಸ್ ಪ್ಯಾಕೇಜ್ ಇದೆ ಎಂದು ಹೇಳಲಾಗುತ್ತಿದ್ದು, ಆ ವಿಚಾರದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಾನು ಅದರಲ್ಲಿ ಇಲ್ಲ ಎಂದರು.