ಬೆಂಗಳೂರು: 30 ವರ್ಷ ಎಎಸ್ಐ ಆಗಿ ಸೇವೆ ಸಲ್ಲಿಸಿದ್ದ ಪೊಲೀಸರಿಗೆ ನಿವೃತ್ತಿಯಾಗುವ ಎರಡು ಗಂಟೆ ಒಳಗಡೆ ಪಿಎಸ್ಐ ಆಗುವ ಭಾಗ್ಯವನ್ನ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್ ಮುತುವರ್ಜಿ ವಹಿಸಿ ಮುಂಬಡ್ತಿ ನೀಡಿದ್ದಾರೆ.
ಐದು ಜನ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಿಗೆ ಕೇವಲ ಎರಡು ಗಂಟೆ ಮಾತ್ರ ನಿವೃತ್ತಿಗೆ ಸಮಯವಿತ್ತು. ಈ ವೇಳೆ ಭಾಸ್ಕರ್ ರಾವ್ ರವರು ಮಹದೇವ, ಕೆ.ಆರ್.ಪುರಶೋತ್ತಮ್, ವೆಂಕಟರಾಮಯ್ಯ, ಅಣ್ಣಯ್ಯ ಹಾಗೂ ಗಣೇಶ್ಗೆ ಎಂಬುವವರಿಗೆ ಮುಂಬಡ್ತಿ ನೀಡಿದ್ದಾರೆ.
ಇನ್ನು ಎಎಸ್ಐನಿಂದ ಪಿಎಸ್ಐಗೆ ಬಡ್ತಿ ವಿಚಾರ ಸುಪ್ರೀಂ ಅಂಗಳದಲ್ಲಿ ವಿಚಾರಣೆ ಹಂತದಲ್ಲಿದ್ದು, ಹಲವರು ಸುಪ್ರೀಂ ತೀರ್ಪಿಗಾಗಿ ಕಾಯ್ತಿದ್ದಾರೆ. ಇದೀಗ ಅರ್ಹ ಅಧಿಕಾರಿಗಳಿಗೆ ಸ್ವತಃ ಎಡಿಜಿಪಿ ಮುತುವರ್ಜಿ ವಹಿಸಿ ಬಡ್ತಿ ನೀಡಿದ್ದಾರೆ. ನಿವೃತ್ತಿ ಬಳಿಕವಾದ್ರು ಪಿಎಸ್ಐಗೆ ಸಿಗುವ ಸೌಲಭ್ಯಗಳು ಸಿಗಬೇಕು ಅನ್ನೋ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.