ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರೊಂದು ಪತ್ತೆಯಾಗಿದೆ.
ಸದ್ಯ ಇದು ಐಎಮ್ಎ ಮಾಲೀಕ ನೂರ್ ಮನ್ಸೂರ್ಗೆ ಸೇರಿದ ಕಾರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. Ka-01 MF-9010 ನಂಬರಿನ ಸ್ಕೋಡಾ ಐಷಾರಾಮಿ ಕಾರು ಪತ್ತೆಯಾಗಿದ್ದು, ಮಿಲನ್ ಫಾರೂಕ್ ಎಂಬುವರ ಹೆಸರಲ್ಲಿ ನೋಂದಣಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕೊಡಿಗೇಹಳ್ಳಿ ಫ್ಲೈಓವರ್ ಬಳಿ ಕಾರು ನಿಂತಿದೆ.
ಸದ್ಯ ಕಾರನ್ನ ಟೋಯಿಂಗ್ ಮಾಡಿರುವ ಹೆಬ್ಬಾಳ ಸಂಚಾರಿ ಪೊಲೀಸರು, ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ಗೆ ಸೇರಿದ ಕಾರ್ ಇದಾಗಿದೆಯಾ ಅಥವಾ ಬೇರೆಯವರಿಗೆ ಸೇರಿದ್ದಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಎಸ್ಐಟಿ ಅಧಿಕಾರಿಗಳಿಗೆ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ.