ETV Bharat / state

ರಮಡ ರೆಸಾರ್ಟ್​ನಿಂದ ವಿಧಾನಸೌಧದ ಕಡೆ ಪ್ರಯಾಣ ಬೆಳೆಸಿದ ಕೇಸರಿಪಡೆ... ವಿಶ್ವಾಸ ಮತಕ್ಕೆ ಪಟ್ಟು?

ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧದ ಕಡೆ ಬಿಜೆಪಿ ಶಾಸಕರು ಪ್ರಯಾಣ ಬೆಳಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತುಪಡಿಸುವಂತೆ ಅಧಿವೇಶನದಲ್ಲಿ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.

ವಿಧಾನಸೌಧದ ಕಡೆ ಪ್ರಯಾಣ ಬೆಳೆಸಿದ ಬಿಜೆಪಿ ಶಾಸಕರು
author img

By

Published : Jul 15, 2019, 10:54 AM IST

ಬೆಂಗಳೂರು: ಕಳೆದ ಮೂರು ದಿನಗಳಿಂದ ರಮಡ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧದ ಕಡೆ ಪ್ರಯಾಣ ಬೆಳಸಿದ್ದಾರೆ.

ಬಿಜೆಪಿ ಶಾಸಕರು ತಂಗಿದ್ದ ರಮಡ ರೆಸಾರ್ಟ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಶಾಸಕರ ಸಭೆಯು ಕಾರಣಾಂತರಗಳಿಂದ ರದ್ದಾಗಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಒಂದು ಬಸ್ ಹಾಗೂ ರೇಣುಕಾಚಾರ್ಯ ನೇತೃತ್ವದಲ್ಲಿ ಒಂದು ಬಸ್ ಸೇರಿ ಎರಡು ಬಸ್​​ಗಳಲ್ಲಿ ಬಹಳ ಲವಲವಿಕೆಯಿಂದ ಶಾಸಕರು ಹೊರಟರು. ಇನ್ನು ಕೆಲವು ಶಾಸಕರು ತಮ್ಮ ಕಾರುಗಳಲ್ಲಿ ಪ್ರಯಾಣ ಬೆಳೆಸಿದರು.

ವಿಧಾನಸೌಧದ ಕಡೆ ಪ್ರಯಾಣ ಬೆಳೆಸಿದ ಬಿಜೆಪಿ ಶಾಸಕರು

ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಿರುವ ಬಿಜೆಪಿ ಶಾಸಕರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಕುಮಾರಸ್ವಾಮಿ ಅವರನ್ನು ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದ್ದು, ಸದನವು ಕುತೂಹಲ ಕೆರಳಿಸಿದೆ.

Intro:Body:

1 BJP MLA's.txt   

close 

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.