ಬೆಂಗಳೂರು: 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಗೆ ಇಂದು ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಚುನಾವಣೋತ್ತರ ಸಮೀಕ್ಷೆಯೂ ಹೊರಬಿದ್ದಿದೆ.
ವಿವಿಧ ಸಂಸ್ಥೆಗಳು ಪ್ರಕಟಿಸಿರುವ ವರದಿಯಂತೆ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಲಿದೆ. 21 ರಿಂದ 25 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂಬುದು ಸಮೀಕ್ಷೆಯಾಧಾರಿತ ಫಲಿತಾಂಶ.
ಚುನಾವಣೋತ್ತರ ಸಮೀಕ್ಷೆ ವರದಿ ಇಂತಿದೆ:
ಇಂಡಿಯಾ ಟುಡೇ
- ಬಿಜೆಪಿ 22-25
- ಕಾಂಗ್ರೆಸ್+ಜೆಡಿಎಸ್ 6-9
- ಇತರೆ 1
ಸಿ-ವೋಟರ್ಸ್
- ಬಿಜೆಪಿ 18
- ಕಾಂಗ್ರೆಸ್+ಜೆಡಿಎಸ್ 10
- ಇತರೆ 01ಚುನಾವಣೋತ್ತರ ಸಮೀಕ್ಷೆ
ಟೈಮ್ಸ್ ನೌ
- ಬಿಜೆಪಿ- 21
- ಕಾಂಗ್ರೆಸ್+ಜೆಡಿಎಸ್ 06
- ಇತರೆ 01
ಆಜ್ತಕ್
- ಬಿಜೆಪಿ 25
- ಕಾಂಗ್ರೆಸ್+ಜೆಡಿಎಸ್ 02
- ಇತರೆ 01
ಮೈ ಆ್ಯಕ್ಸಿಸ್
- ಬಿಜೆಪಿ 23
- ಕಾಂಗ್ರೆಸ್+ಜೆಡಿಎಸ್ 04
- ಇತರೆ 01
ಚಾಣಕ್ಯ
- ಬಿಜೆಪಿ 23
- ಕಾಂಗ್ರೆಸ್+ಜೆಡಿಎಸ್ 05
- ಇತರೆ 00
ವಿವಿಧ ಸಮೀಕ್ಷಾ ಸಂಸ್ಥೆಗಳು ನೀಡಿರುವ ವರದಿ ಇದಾಗಿದ್ದು, ಅಂತಿಮವಾಗಿ ಮತದಾರ ಪ್ರಭು ಯಾರ ಕೈ ಹಿಡಿದಿದ್ದಾನೆ ಅನ್ನೋದು ಮೇ 23ರಂದು ಪ್ರಕಟವಾಗಲಿರುವ ಅಧಿಕೃತ ಫಲಿತಾಂಶದ ಬಳಿಕವೇ ತಿಳಿಯಲಿದೆ.