ಬಸವಕಲ್ಯಾಣ : ವಿದ್ಯುತ್ ತಗುಲಿ ಯುವಕನ್ನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ನಡೆದಿದೆ.
ಗ್ರಾಮದ ರಾಮೇಶ್ವರ ತಾನಾಜಿ ಗಾಯಕವಾಡ (18) ಮೃತ ಯುವಕ. ಮನೆಯಲ್ಲಿನ ವಿದ್ಯುತ್ ತಂತಿ ಜೋಡಿಸಲು ಹೊದ ವೇಳೆ ವಿದ್ಯುತ್ ತಗುಲಿ ಈ ಘಟನೆ ಸಂಭವಿಸಿದೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಐ ಪ್ರದೀಪ ದುಬೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.