ETV Bharat / state

ಬಸವಕಲ್ಯಾಣದಲ್ಲಿ ದಸರಾ ಪ್ರಯುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿ

author img

By

Published : Oct 30, 2020, 10:58 AM IST

ಬೀದರ್​ ಜಿಲ್ಲೆಯ ಬಸವಕಲ್ಯಾಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.

dsd
ಬಸವಕಲ್ಯಾಣದಲ್ಲಿ ದಸರಾ ಪ್ರಯುಕ್ತ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ

ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ತಾಲೂಕಿನ ಯರಂಡಗಿ ಗ್ರಾಮದಲ್ಲಿ ಜೈ ಭವಾನಿ ಗೆಳೆಯರ ಬಳಗದ ವತಿಯಿಂದ ಅಂತರ್​ ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿ ಜರುಗಿತು.

ಬಸವಕಲ್ಯಾಣದಲ್ಲಿ ದಸರಾ ಪ್ರಯುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿ

ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಚಿಂನಚಳಿ ಜೈ ಮಾಕಾಲಿ ತಂಡಕ್ಕೆ ತಾಜೋದ್ದಿನ್ ಮುಲ್ಲಾ 15 ಸಾವಿರ ರೂ., ದ್ವೀತಿಯ ಸ್ಥಾನ ಪಡೆದ ಭಾಲ್ಕಿಯ ಚನ್ನಬಸವ ತಂಡಕ್ಕೆ ಸದಾನಂದ ಹಳ್ಳೆ 8 ಸಾವಿರ ರೂ. ಹಾಗೂ ತೃತೀಯ ಸ್ಥಾನ ಪಡೆದ ಬೆಳಗಾವಿಯ ರಾಯಬಾಗ್​ನ ತಂಡಕ್ಕೆ ಸೂರ್ಯಕಾಂತ ಗುಜ್ಜೆ 5 ಸಾವಿರ ರೂ. ಹಾಗೂ ಟ್ರೋಫಿ ವಿತರಿಸಿದರು.

ನಾಲ್ಕನೇ ಸ್ಥಾನ ಪಡೆದ ಕರ್ನೂಲ್ ತಂಡಕ್ಕೆ 3 ಸಾವಿರ ರೂ. ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ವೇಳೆ ಉತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ರಾಜಕುಮಾರ ರಾಜೋಳೆ ತಲಾ 1 ಸಾವಿರ ರೂ. ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.