ETV Bharat / state

ಬಸವಕಲ್ಯಾಣ: ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ

ಬಸವಕಲ್ಯಾಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಎಸ್​​ಬಿಐ ಬ್ಯಾಂಕ್ ಪಕ್ಕದ ಖಾಸಗಿ ಕಟ್ಟಡ ಹಾಗೂ ತ್ರಿಪುರಾಂತ ಮಡಿವಾಳ ವತ್ತದಲ್ಲಿರುವ ಬಿಕೆಡಿಬಿ ಮಹಾದ್ವಾರದ ಬಳಿ ನಿರ್ಮಿಸಲಾಗುತ್ತಿದ್ದ ಖಾಸಗಿ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.

Unauthorized building clearance in basavakalyana,  ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ
ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ
author img

By

Published : Jan 9, 2020, 10:06 PM IST

ಬಸವಕಲ್ಯಾಣ(ಬೀದರ್​): ಅನುಮತಿ ಇಲ್ಲದೆ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಎರಡು ಖಾಸಗಿ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ನೆಲಸಮಗೊಳಿಸಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಎಸ್​​ಬಿಐ ಬ್ಯಾಂಕ್ ಪಕ್ಕದ ಖಾಸಗಿ ಕಟ್ಟಡ ಹಾಗೂ ತ್ರಿಪುರಾಂತ ಮಡಿವಾಳ ವತ್ತದಲ್ಲಿರುವ ಬಿಕೆಡಿಬಿ ಮಹಾದ್ವಾರದ ಬಳಿ ನಿರ್ಮಿಸಲಾಗುತ್ತಿದ್ದ ಖಾಸಗಿ ಕಟ್ಟಡವನ್ನು ಜೆಸಿಬಿ ಮೂಲಕ ಅಧಿಕಾರಿಗಳು ತೆರವುಗೊಳಿಸಿದರು.

ಬಸವಕಲ್ಯಾಣದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮ

ಎಸ್​​ಬಿಐ ಬ್ಯಾಂಕ್ ಪಕ್ಕ ನಿರ್ಮಿಸಲಾಗುತ್ತಿರುವ ಕಟ್ಟಡ ಅನಧಿಕೃತವಾಗಿದ್ದು, ಅದನ್ನು ನೆಲಸಮಗೊಳಿಸಬೇಕು ಎಂದು ಖಾಸಗಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ಎಚ್.ಆರ್.ಮಹಾದೇವ, ತಕ್ಷಣ ಕಟ್ಟಡ ನೆಲಸಮಗೊಳಿಸುವಂತೆ ಸೂಚಿಸಿದ್ದರು. ಬಳಿಕ ತ್ರಿಪುರಾಂತ ಮಡಿವಾಳ ವೃತ್ತದ ಬಳಿಯಿರುವ ಬಿಕೆಡಿಬಿ ಮಹಾದ್ವಾರದ ಪಕ್ಕದಲ್ಲಿ ರಸ್ತೆಗೆ ಅತಿಕ್ರಮಿಸಿಕೊಂಡು ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡವನ್ನು ಪರಿಶೀಲಿಸಿದ ಡಿಸಿ, ಆ ಕಟ್ಟಡವನ್ನೂ ತೆರವು ಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ತಂಡ, ಜೆಸಿಬಿ ಮೂಲಕ ಕಟ್ಟಡಗಳನ್ನು ತೆರವುಗೊಳಿಸಿದೆ.

Intro:
( ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿ ಸರ್. ವಿಡಿಯೊಗಳನ್ನು ಪೂರ್ತಿಯಾಗಿ ಬಳಸಿಕೊಳ್ಳಿ ಸರ್)

ಮೂರು ಕಳಿಸಲಾಗಿದೆ

ಬಸವಕಲ್ಯಾಣ: ನಗರಸಭೆ ಅನುಮತಿ ಇಲ್ಲದೆ ಅನಧಿಕೃತವಾಗಿ ನಿರ್ಮಾಣ ಮಾಡುತಿದ್ದ ಎರಡು ಖಾಸಗಿ ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ನೆಲ ಸಮ ಗೊಳಿಸಿದರು.
ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಎಸ್ಬಿಐ ಬ್ಯಾಂಕ್ ಪಕ್ಕದ ಖಾಸಗಿ ಕಟ್ಟಡ ಹಾಗೂ ತ್ರಿಪುರಾಂತ ಮಡಿವಾಳ ವತ್ತದಲ್ಲಿರುವ ಬಿಕೆಡಿಬಿ ಮಹಾದ್ವಾರದ ಬಳಿ ನಿರ್ಮಿಸಲಾಗುತ್ತಿದ್ದ ಖಾಸಗಿ ಕಟ್ಟಡವನ್ನು ಜೆಸಿಬಿ ಯಂತ್ರದ ಮೂಲಕ ಅಧಿಕಾರಿಗಳು ತೆರವುಗೊಳಿಸಿದರು.
ಎಸ್ಬಿಐ ಬ್ಯಾಂಕ್ ಪಕ್ಕದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡ ಅನಧಿಕೃತವಾಗಿದ್ದು, ಅದನ್ನು ನೆಲ ಸಮ ಗೊಳಿಸಬೇಕು ಎಂದು ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ: ಎಚ್.ಆರ್.ಮಹಾದೇವ ಅವರು, ತಕ್ಷಣ ಕಟ್ಟಡ ನೆಲಸಮ ಗೊಳಿಸಬೇಕು ಎಂದು ಸೂಚನೆ ನೀಡಿದರು. ನಂತರ ತ್ರಿಪುರಾಂತ ಮಡಿವಾಳ ವೃತ್ತದ ಬಲಿ ಇರುವ ಬಿಕೆಡಿಬಿ ಮಹಾದ್ವ್ವಾರದ ಪಕ್ಕದಲ್ಲಿ ರಸ್ತೆಗೆ ಅತಿಕ್ರಮಿಸಿಕೊಂಡು ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡವನ್ನು ಪರಿಶೀಲಿಸಿದ ಡಿಸಿ ಅವರು, ಇಲ್ಲಿ ಅತಿಕ್ರಮಣ ಗೊಳಿಸಿ ಕಟ್ಟಲಾಗುತ್ತಿರುವ ಕಟ್ಟಡ ತೆರವು ಗೊಳಿಸಬೇಕು ಎಂದು ನಗರ ಸಭೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ನೇತೃತ್ವದಲ್ಲಿ ಎರಡು ಕಟ್ಟಡ ನಿರ್ಮಾಣ ಸ್ಥಳಗಳಿಗೆ ತೆರಳಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ, ಜೆಸಿಬಿ ಯಂತ್ರದ ಮೂಲಕ ಕಟ್ಟಡಗಳನ್ನು ತೆರವು ಗೊಳಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ನಿರ್ಮಾಣ ಮಾಡಲಾಗುತಿದ್ದ ಕಟ್ಟಡ ಹಾಗೂ ತ್ರಿಪುರಾಂತ ಮಡಿವಾಳ ವೃತ್ತದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಖಾಸಗಿ ಕಟ್ಟಡಗಳು ಸ್ಥಳ ಸರ್ಕಾರಕ್ಕೆ ಸಂಬAಧಿಸಿವೆ. ಈ ಎರಡು ಕಟ್ಟಡಗಳನ್ನು ಸಂಪೂರ್ಣ ನೆಲ ಸಮ ಗೊಳಿಸಿ, ಸರ್ಕಾರಿ ಆಸ್ತಿ ಎಂದು ನಾಮಫಲಕ ಅಳವಡಿಸಬೇಕು ಎಂದು ನಗರಸಭೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಎಚ್.ಆರ್.ಮಹಾದೇವ ಅವರು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಬೈಟ್-೧
ಸುರೇಶ ಬಬಲಾದ್
ಪೌರಾಯುಕ್ತರು ನಗರಸಭೆ ಬಸವಕಲ್ಯಾಣ

( ಬಿಳಿ ಬಣ್ಣದ ಅಂಗಿ ಧರಿಸಿದ್ದಾರೆ)

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.