ಬೀದರ್: ಕೊರೊನಾ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರೆದಿದೆ. ಇಂದು ಒಂದೇ ದಿನ 84 ಜನರಲ್ಲಿ ಸೋಂಕು ದೃಢವಾಗಿದ್ದು ಇಬ್ಬರು ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ.
ಭಾಲ್ಕಿಯಲ್ಲಿ-12, ಬೀದರ್-24, ಹುಮನಾಬಾದ್- 18, ಔರಾದ್-15, ಬಸವಕಲ್ಯಾಣ -15 ಜನರಿಗೆ ಸೋಂಕು ತಗುಲಿದ್ದು ಒಟ್ಟು 84 ಜನರು ಸೋಂಕಿಗೀಡಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಇನ್ನು 29 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಸೋಂಕಿತರ ಸಂಖ್ಯೆ 2,796ಕ್ಕೆ ಏರಿಕೆಯಾಗಿದೆ. 91 ಜನರು ಕೊರೊನಾಗೆ ಬಲಿಯಾಗಿದ್ದು 1,832 ಜನರು ಗುಣಮುಖರಾಗಿದ್ದಾರೆ. 701 ಜನರ ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.