ಬೀದರ್: ಬಟ್ಟೆ ಅಂಗಡಿ ವ್ಯಾಪಾರಿಯೊಬ್ಬನನ್ನು ಗ್ರಾಹಕರ ಸೊಗಿನಲ್ಲಿ ಬಂದ ಆರು ಜನ ಮಹಿಳೆಯರ ಗ್ಯಾಂಗ್ವೊಂದು ಅಂಗಡಿಯಲ್ಲಿ ಬಟ್ಟೆ ಕಳ್ಳತನ ಮಾಡಿದ ಘಟನೆ ಬೀದರ್ನಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಬುದ್ಧ ವಿಹಾರ ಕಾಂಪ್ಲೆಕ್ಸ್ನಲ್ಲಿ ಇರುವ ಪ್ರೇಮ ಡ್ರೇಸೆಸ್ ಎಂಬ ಅಂಗಡಿಯಲ್ಲಿ ಮೊದಲು ಒಬ್ಬ ಮಹಿಳೆ ಬಂದು ಪ್ಯಾಂಟ್ ಶರ್ಟ್ ಖರೀದಿಸಲು ಮುಂದಾಗ್ತಾಳೆ. ಆಮೇಲೆ ಐದು ಜನ ಕಳ್ಳಿಯರು ಅಂಗಡಿಗೆ ನುಗ್ಗಿ ಮಾಲೀಕನ ದಿಕ್ಕು ಮತ್ತೊಂದೆಡೆಗೆ ಸೆಳೆದು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ವ್ಯವಸ್ಥಿತವಾಗಿ ಕಳ್ಳತನ ಮಾಡಿದ್ದಾರೆ.
ಈ ಕಳ್ಳಿಯರ ಕೈ ಚಳಕ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಟೌನ್ ಪೊಲೀಸರು ತನಿಖೆ ನಡೆಸಿ ಕಳ್ಳಿಯರನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲ ಕಳ್ಳಿಯರು ಭಾಲ್ಕಿ ತಾಲೂಕಿನ ನಗರಭವನ ಧನ್ನೂರ ತಾಂಡದವರಾಗಿದ್ದು, ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.