ETV Bharat / state

ಬಿಜೆಪಿಯವರು ಚುನಾವಣೆ ವೇಳೆ ಸ್ವರ್ಗವನ್ನೇ ತಂದು ನಿಲ್ಲಿಸ್ತಾರೆ, ಬಳಿಕ ಮರೆತುಬಿಡ್ತಾರೆ: ಹೆಚ್​ಡಿಕೆ ವ್ಯಂಗ್ಯ - Then forget about it

ಇತ್ತೀಚೆಗೆ ನಡೆದ ಶಿರಾ ವಿಧಾನಸಭೆ ಉಪಚುನಾವಣೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಕೆರೆ ಅಂಗಳದಲ್ಲೇ ದೊಡ್ಡ ಪೆಂಡಾಲ್ ಹಾಕಿ ಕೆರೆಗೆ ನೀರು ತುಂಬಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಳಿಕ ಎಂದಿನಂತೆ ಮರೆತು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಚ್​ಡಿಕೆ
ಎಚ್​ಡಿಕೆ
author img

By

Published : Apr 7, 2021, 7:39 PM IST

ಬಸವಕಲ್ಯಾಣ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ಜನರ ಮುಂದೆ ಸ್ವರ್ಗವನ್ನೇ ತಂದು ನಿಲ್ಲಿಸುತ್ತಾರೆ. ಆದರೆ ಚುನಾವಣೆ ಬಳಿಕ ಕಾರ್ಯಕರ್ತರನ್ನೇ ಮರೆತುಬಿಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಕಲ್ಯಾಣ ಕ್ಷೇತ್ರವನ್ನು ದತ್ತು ತಗೆದುಕೊಳ್ಳುವುದಾಗಿ ಹೇಳಬಹುದು. ಆದರೆ ಅಸಲಿಗೆ ಈ ಹಿಂದೆ ನಡೆದಿದ್ದ ಉಪಚುನಾವಣೆಯಲ್ಲಿ ಇದೇ ಮಾತು ಹೇಳಿ ಯಾವ ಭರವಸೆಗಳೂ ಈಡೇರಿಸಿಲ್ಲ. ಇತ್ತೀಚೆಗೆ ನಡೆದ ಶಿರಾ ವಿಧಾನಸಭೆ ಉಪಚುನಾವಣೆ ವೇಳೆ ಕೆರೆ ಅಂಗಳದಲ್ಲೇ ದೊಡ್ಡ ಪೆಂಡಾಲ್ ಹಾಕಿ ಕೆರೆಗೆ ನೀರು ತುಂಬಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಳಿಕ ಎಂದಿನಂತೆ ಮರೆತು ಬಿಟ್ಟಿದ್ದಾರೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ

ನಾನು ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಗಳಿಗೆ 600 ಕೋಟಿ ರೂ. ಅನುದಾನ ಕೊಟ್ಟಿದ್ದೆ. ಅದರ ಜೊತೆಯಲ್ಲಿ ಬಸವಕಲ್ಯಾಣ ಕ್ಷೇತ್ರವೊಂದಕ್ಕೆ 75 ಕೋಟಿ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಕಲ್ಪಿಸಿದ್ದೆ. ವಿವಿಧ ರಸ್ತೆಗಳ ಅಭಿವೃದ್ಧಿಗೂ ಅನುದಾನ ಮೀಸಲಿಟ್ಟಿದ್ದೆ. ಕಳೆದ ಎರಡು ವರ್ಷಗಳಲ್ಲಿ ಎಷ್ಟು ಪ್ರಮಾಣದಲ್ಲಿ ಕೆಲಸಗಳಾಗಿವೆ ಎಂಬುದನ್ನು ಜನ ಮನಗಾಣಬೇಕು ಎಂದರು.

ಜೆಡಿಎಸ್ ಬಸವಕಲ್ಯಾಣದಲ್ಲಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಹಿಂದೆ 7 ಬಾರಿ ಜನತಾ ಪರಿವಾರ ಗೆದ್ದ ಇತಿಹಾಸವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಗಮನಾರ್ಹ ಮತಗಳನ್ನು ಪಡೆಯಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಪಕ್ಷದ ಸಂಘಟನೆ ಕುಂಠಿತವಾಗಿದೆ. ಆದರೆ, ನಿಷ್ಠಾವಂತ ಕಾರ್ಯಕರ್ತರ ಪಡೆ ಹಾಗೇ ಇದೆ. ಈ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.

ಇದನ್ನೂ ಓದಿ.. ನನ್ನನ್ನು ಕೂಡಿ ಹಾಕಿ ಕೆಲಸ ಮಾಡಿಸ್ತಿದ್ದಾರೆ : ಉಡುಪಿ ಕೆಎಸ್​ಆರ್​ಟಿಸಿ ಡಿಪೋ ಮೆಕ್ಯಾನಿಕ್ ಅಳಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.