ಬೀದರ್: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ಹುಮನಾಬಾದ್ ಪಟ್ಟಣದಲ್ಲಿರುವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಮತ್ತು ಪಕ್ಕದ ರಾಜ್ಯಗಳ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.
ಜಾತ್ರೆಯ ಪ್ರಮುಖ ಕಾರ್ಯಕ್ರಮವಾದ ಅಗ್ನಿ ಪ್ರವೇಶಕ್ಕೆ ಸ್ಥಳೀಯ ಶಾಸಕ ರಾಜಶೇಖರ್ ಪಾಟೀಲ್ ವೀರಭದ್ರೇಶ್ವರ ಅಡ್ಡ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಆಕರ್ಷಣೀಯ ಸಿಡಿಮದ್ದುಗಳ ಪ್ರದರ್ಶನ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಜಾತ್ರೆಯಲ್ಲಿ ವೀರಭದ್ರೇಶ್ವರ ಅವತಾರದಲ್ಲಿ ವೀರಗಾಸೆ ಕಲಾವಿದರು ಪಾರಂಪರಿಕ ನೃತ್ಯವನ್ನು ಬೀದಿ ಬೀದಿಯಲ್ಲಿ ಪ್ರದರ್ಶನ ಮಾಡಿದರು.