ಬೀದರ್: ಆಸ್ತಿಗಾಗಿ ಮಗನೇ ಹೆತ್ತ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಅಮಾನವೀಯ ಘಟನೆ ಬೀದರ್ನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಣಮೇಳಕುಂದಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋದಾವರಿ ವಾಲೆ(60) ಕೊಲೆಯಾದ ತಾಯಿ. ಸಂಜುಕುಮಾರ್ ತಾಯಿಯನ್ನೇ ಕೊಲೆಗೈದ ಕಟುಕ.
ಮನೆಯಲ್ಲಿ ಮಲಗಿದ್ದ ವೇಳೆ ದೊಡ್ಡ ಕಲ್ಲು ಬಂಡೆಯೊಂದನ್ನು ಎತ್ತಿ ತಾಯಿಯ ಮುಖದ ಮೇಲೆ ಹಾಕಿ ಕೊಲೆ ಮಾಡಿದ ಆರೋಪಿ ಸಂಜುಕುಮಾರ್ ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಈ ಕುರಿತು ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.