ETV Bharat / state

ನಾವು ಅಧಿಕಾರಕ್ಕೆ ಬಂದ್ರೆ ₹2 ಲಕ್ಷ ಕೋಟಿ ನೀರಾವರಿಗೆ ಮೀಸಲಿಡ್ತೇವೆ: ಸಿದ್ದರಾಮಯ್ಯ

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ಕೊಟ್ಟರು.

sidddaramaiah
ಸಿದ್ದರಾಮಯ್ಯ
author img

By

Published : Feb 3, 2023, 5:39 PM IST

ಸಿದ್ದರಾಮಯ್ಯ ಭರವಸೆ

ಬೀದರ್: "ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಎರಡು ಲಕ್ಷ ಕೋಟಿ ರೂಪಾಯಿ ಹಣವನ್ನು ನೀರಾವರಿ ಯೋಜನಗೆಳಿಗೆ ಖರ್ಚು ಮಾಡಲಿದ್ದೇವೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್​​ನ ಪ್ರಜಾಧ್ವನಿ ಯಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಅವರು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಜಬಶೆಟ್ಟಿ ಅವರ ನಿವಾಸದಲ್ಲಿ ಉಪಹಾರ ಸೇವಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. "ನಾವು ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳ ಕಾಲ ನೀರಾವರಿಗೆ 2 ಲಕ್ಷ ಕೋಟಿ ಮೀಸಲಿಡಲಿದ್ದು, ಪ್ರತಿ ವರ್ಷ 40 ಸಾವಿರ ಕೋಟಿ ರೂಗಳಂತೆ ಖರ್ಚು ಮಾಡಿ ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಈ ಹಿಂದೆಯೂ ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ" ಎಂದರು.

"ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಎರಡು ಲಕ್ಷ ಜನ ಭಾಗಿಯಾಗಿದ್ದರು. ಈ ವೇಳೆ ಹತ್ತು ಅಂಶಗಳ ಕಾರ್ಯಸೂಚಿಯನ್ನು ಸಮಾವೇಶದಲ್ಲಿ ಭಾಗಿಯಾದ ಜನರ ಮುಂದಿಟ್ಟಿದ್ದೀವಿ. ಅಲ್ಲಿಯೂ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ" ಎಂದು ತಿಳಿಸಿದರು.

"ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೂರು ಸಾವಿರ ಕೋಟಿ ರೂ ಕೊಡಲಿದ್ದೇವೆ ಎಂದು ಈ ವರ್ಷ ಹೇಳಿತ್ತು, ಅದು ಕೊಟ್ಟಿಲ್ಲ. ಹೈದರಾಬಾದ್​ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮುರು ನಾಮಕರಣ ಮಾಡಿದ್ದು ಮಾತ್ರ ಅವರ ಸಾಧನೆ. ಅದನ್ನು ಬಿಟ್ಟು ಈ ಭಾಗಕ್ಕೆ ಬೇರೇನೂ ಮಾಡಿಲ್ಲ" ಎಂದರು.

"ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಕಲಬುರಗಿಯಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶ ಮಾಡಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಮೊದಲ ಸಮಾವೇಶ ಇದಾಗಿತ್ತು. ಅದರಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಅಲ್ಲಿ ನರೆದಿದ್ದ ಜನರಿಗೆ ಅಧಿಕಾರಕ್ಕೆ ಬಂದನಂತರ ಮಾಡಲಿರುವ ಕಾರ್ಯಗಳ ಬಗ್ಗೆ ಭರವಸೆಗಳನ್ನು ನೀಡಿದ್ದೇವೆ" ಎಂದು ತಿಳಿಸಿದರು

ಗ್ರಾ.ಪಂಗಳಿಗೆ ವಾರ್ಷಿಕ ಅನುದಾನ: "ನಾವು ಅಧಿಕಾರಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರದ ಎಲ್ಲಾ ಗ್ರಾ.ಪಂ ಗಳಿಗೆ ಹೆಚ್ಚುವರಿ ತಲಾ ಒಂದು ಕೋಟಿ ರೂ. ಅನುದಾನವನ್ನು ಪ್ರತಿ ವರ್ಷ ನೀಡಲಿದ್ದೇವೆ. ಅಲ್ಲದೇ ವಿಶೇಷ ರಿಯಾಯಿತಿಗಳನ್ನು ಕೊಡಲಿದ್ದೇವೆ ಎಂಬ ಭರವಸೆಯನ್ನು ನೀಡಿದ್ದೇವೆ" ಎಂದರು.

"ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪ್ರಾರಂಭಿಸಿದ್ದು, ನಾನು ಡಿ.ಕೆ ಶಿವಕುಮಾರ್, ಎಂ‌.ಬಿ.ಪಾಟೀಲ, ಹರಿಪ್ರಸಾದ್, ಈಶ್ವರ ಖಂಡ್ರೆ ಎಲ್ಲರೂ ಒಗ್ಗಟ್ಟಾಗಿ 20 ಜಿಲ್ಲಾ ಮಟ್ಟದ ಸಮಾವೇಶವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈ ಸಮಾವೇಶಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧದ ಜಾರ್ಜ್ ಶಿಟ್​ ಅನ್ನು ಕೂಡಾ ಜನರ ಮುಂದೆ ಇಟ್ಟಿದ್ದೇವೆ. ಅದಕ್ಕೆ ಬಿಜೆಪಿ ಸರ್ಕಾರದ ಪಾಪದ ಪುರಾಣ ಎಂದು ಹೆಸರಿಡಲಾಗಿದೆ" ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುಖಂಡರಾದ ಎಂ.ಬಿ.ಪಾಟೀಲ್, ಜಿಲ್ಯಾಧ್ಯಕ್ಷ ಬಸವರಾಜ್ ಜಾಬ್ ಶೆಟ್ಟಿ, ಶಾಸಕ ಜಮೀರ್​ ಅಹ್ಮದ್​ ​ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ನಟ ಸುದೀಪ್ ಮನೆಯಲ್ಲಿ ಡಿಕೆಶಿ ಡಿನ್ನರ್: ರಾಜಕೀಯ ವಲಯದಲ್ಲಿ ಗರಿಗೆದರಿದ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.