ETV Bharat / state

ಬೀದರ್​ನ ಅಮರೇಶ್ವರ ಜಾತ್ರೆ: ಇಂದು ರಥೋತ್ಸವ - shri amareshwar temple Car Fest

ಬೀದರ್ ಜಿಲ್ಲೆಯ ಪ್ರಖ್ಯಾತ ಶ್ರೀಕ್ಷೇತ್ರ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಇಂದು ರಥೋತ್ಸವ ಜರಗಲಿದೆ.

bidar
ಅಮರೇಶ್ವರ ಜಾತ್ರೆ
author img

By

Published : Mar 12, 2021, 10:41 AM IST

ಬೀದರ್: ಶ್ರೀಕ್ಷೇತ್ರ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಿನ್ನೆ ಅಗ್ನಿ ಪ್ರವೇಶ ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಸನ್ನಿಧಿಯಲ್ಲಿ ದರ್ಶನ ಪಡೆದರು.

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಜಾತ್ರೆ ನಡೆಯುತ್ತಿದ್ದು ಅಗ್ನಿ ಪ್ರವೇಶ ನಡೆಯಿತು. ಸಾವಿರಾರು ಭಕ್ತ ಸಮೂಹದ ನಡುವೆ ಪಟ್ಟಣದ ಬಾವಣೆಗಳಲ್ಲಿ ದೇವರ ಮೆರವಣಿಗೆ ನಡೆದು ಬೆಳಗ್ಗಿನ ಜಾವದಲ್ಲಿ ಅಗ್ನಿ ಪ್ರವೇಶ ನಡೆಯಿತು. ಈ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಅವರು ಅಮರೇಶ್ವರ ಸನ್ನಿಧಿಯಲ್ಲಿ ದರ್ಶನ ಪಡೆದರು.

ಅಮರೇಶ್ವರ ಜಾತ್ರೆ

ಇಂದು ರಥೋತ್ಸವ: ಅಮರೇಶ್ವರ ಜಾತ್ರೆ ನಿಮಿತ್ತ ಇಂದು ರಥೋತ್ಸವ ಜರಗಲಿದ್ದು ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ಏಕೈಕ ಒಂಟೆ ಜಾತ್ರೆ ಖ್ಯಾತಿ: ಶ್ರೀ ಅಮರೇಶ್ವರ ಜಾತ್ರೆಯಲ್ಲಿ ಈ ಬಾರಿಯ ಪಶು ಪ್ರದರ್ಶನದ ಜೊತೆ ಒಂಟೆಗಳ ಪ್ರದರ್ಶನ ನಡೆಯಲಿದೆ. ರಾಜಸ್ಥಾನ, ಹರಿಯಾಣ, ಪಂಜಾಬ್​ ಮೂಲದಿಂದ ಒಂಟೆಗಳು ಇಲ್ಲಿಗೆ ಬಂದು ಜಮಾಯಿಸಿ ತಿಂಗಳುಗಟ್ಟಲೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿತ್ತು. ಆದ್ರೆ ಇದೀಗ ಒಂಟೆಗಳ ಸಂತತಿ ಕಡಿಮೆ ಆಗ್ತಿದ್ದಂತೆ ಒಂಟೆ ಜಾತ್ರೆ ವೈಭವ ಕೂಡ ಕಡಿಮೆ ಆಗಿದೆ. ಆದರೂ ಕೆಲವೊಂದು ಭಾಗದಿಂದ ಒಂಟೆಗಳು ಪಾಲ್ಗೊಂಡು ಜಾತ್ರೆ ಖ್ಯಾತಿ ಉಳಿಸಿಕೊಳ್ಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.