ಬಸವಕಲ್ಯಾಣ: ಮಾಸ್ಕ್ ಧರಿಸದೆ ರಸ್ತೆಗೆ ಇಳಿಯುವ ಸಾರ್ವಜನಿಕರು ಹಾಗೂ ಸಾಮಾಜಿಕ ಅಂತರ ಕಾಪಾಡದ ಅಂಗಡಿಗಳಿಗೆ ಇಲ್ಲಿನ ನಗರಸಭೆ ಅಧಿಕಾರಿಗಳ ತಂಡ ದಂಡ ವಿಧಿಸುವ ಮೂಲಕ ಮುಂಜಾಗ್ರತಾ ಕ್ರಮ ವಹಿಸದ ಜನರಿಗೆ ಬಿಸಿ ಮುಟ್ಟಿಸಿದೆ.
ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡ, ನಗರದ ಮುಖ್ಯ ರಸ್ತೆಯಿಂದ ಹುಲಸೂರ ರಸ್ತೆವರೆಗೆ ಕಾರ್ಯಚರಣೆ ನಡೆಸಿ, ಮುಖಕ್ಕೆ ಮಾಸ್ಕ್ ಇಲ್ಲದೆ ರಸ್ತೆ ಮೇಲೆ ಆಗಮಿಸಿದ 53 ಜನರನ್ನು ಹಿಡಿದು ತಲಾ 50 ರೂ. ದಂಡ ವಿಧಿಸಿದೆ.
ಇದೇ ವೇಳೆ ಮುಖ್ಯ ರಸ್ತೆ ಮಾರ್ಗದಲ್ಲಿ ಇರುವ ಅಂಗಡಿಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು, 500 ರೂ. ದಂಡ ವಿಧಿಸಿದರು.