ಬೀದರ್: ಉಡಾನ್ ಯೋಜನೆ ಅಡಿಯಲ್ಲಿ ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎದುರೇ ಪೊಲೀಸರು ಹಾಗೂ ಸ್ಥಳೀಯ ಮುಖಂಡರ ನಡುವೆ ಮಾತಿನ ಚಕಮಕಿ ನೂಕು ನುಗ್ಗಲು ಉಂಟಾಯಿತು.
ಬೆಂಗಳೂರಿನಿಂದ ಆಗಮಿಸಿದ್ದ ಬಿಎಸ್ ವೈ ಜತೆಯಲ್ಲಿ ಶಾಸಕರು, ಸಂಸದರು, ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಇದ್ದರು. ಏರ್ಪೋರ್ಟ್ ಮುಖ್ಯದ್ವಾರದಿಂದ ಸಿಎಂ ಒಳ ಪ್ರವೇಶ ಮಾಡುವಾಗ ಅವರೊಂದಿಗೆ ಸಾಕಷ್ಟು ಜನ ನುಗ್ಗಿ ಬಂದರು. ಅವರಿಗೆ ಅವಕಾಶ ನಿರಾಕರಿಸಿದ್ದಕ್ಕೆ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.