ಬೀದರ್: ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಯಲ್ಲಿ ಗೊಂದಲ ಸೃಷ್ಟಿಸಿ ಈಗ ಅದನ್ನು ಹಿಂದುರುಗಿಸುವಂತೆ ಸೂಚನೆ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನೂರಾರು ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ರೈತ ಸಂಪರ್ಕ ಕೇಂದ್ರದ ಮೂಲಕ ಸೋಯಾಬಿನ್ ಬೀಜ ವಿತರಣೆ ಮಾಡಿದ ಕೃಷಿ ಇಲಾಖೆ ಬೀಜ ಕಳಪೆಯಾಗಿದೆ ಎಂದು ಹೇಳಿ, ವಾಪಸ್ ಮಾಡುವಂತೆ ತಿಳಿಸಿದೆ. ಇತ್ತ ಹೊಸ ಬಿತ್ತನೆ ಬೀಜ ವಿತರಣೆ ಮಾಡದೆ ಸುಮ್ಮನಾಗಿದೆ. ಹೀಗಾಗಿ ರೈತರು ಕೃಷಿ ಇಲಾಖೆ ಅಧಿಕಾರಿಗಳ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.