ಬೀದರ್: ಕೋವಿಡ್-19 ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ 3.0 ಔರಾದ್ ಮಾರುಕಟ್ಟೆಯಲ್ಲಿ ಸಾಮೂಹಿಕವಾಗಿ ಉಲ್ಲಂಘನೆಯಾಗ್ತಿರುವುದು ಕಂಡು ಬಂದಿದೆ.
ಜಿಲ್ಲೆಯ ಔರಾದ್ ಪಟ್ಟದ ಮಾರುಕಟ್ಟೆಯಲ್ಲಿ ಬಹುತೇಕ ಜನರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಾರೆ. ಮೂರನೆ ಹಂತದ ಲಾಕ್ಡೌನ್ನಲ್ಲಿ ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ ಪರಿಷ್ಕೃತ ನಿಷೇಧಾಜ್ಞೆ ಆದೇಶದಂತೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿದರೂ ಬಹುತೇಕ ಅಂಗಡಿಗಳ ಮುಂದೆ ಜನರು ಗುಂಪಾಗಿ ಸೇರಿ ಸಾಮಾಜಿಕ ಅಂತರವನ್ನು ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಬೈಕ್ ಸವಾರರು, ಪಾದಚಾರಿಗಳು ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಸಾಮೂಹಿಕವಾಗಿ ರಸ್ತೆಯಲ್ಲಿ ಸಂಚರಿಸಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.