ಬೀದರ್: ಔರಾದ್ ತಾಲೂಕಿನ ಎಕಂಬಾ-ಕರಕ್ಯಾಳ ರಸ್ತೆಯ ಪಕ್ಕದ ನಾಲೆಯ ರಸ್ತೆ ಪಕ್ಕ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು 50 ವರ್ಷದ ವಯೋಮಾನದವರು ಎಂದು ಹೇಳಲಾಗಿದೆ. ಆದರೆ, ಈ ವ್ಯಕ್ತಿ ಯಾರು? ಇವನನ್ನು ಕೊಲೆ ಮಾಡಿದ ಆರೋಪಿಗಳು ಯಾರೆಂದು ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕೆ ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಸಿಪಿಐಗಳಾದ ರಮೇಶಕುಮಾರ್, ದಿಲೀಪ ಸಾಗರ, ಪಿಎಸ್‌ಐ ನಾನಾಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ಯಾರೋ ಈ ವ್ಯಕ್ತಿಯನ್ನ ಕೊಲೆ ಮಾಡಿ ಇಲ್ಲಿ ಎಸೆದು ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.