ETV Bharat / state

ಬೀದರ್​ ಮದರಸಾಗೆ ನುಗ್ಗಿ ಪೂಜೆ ನೆರವೇರಿಸಿದ ಆರೋಪ : 9 ಮಂದಿ ವಿರುದ್ಧ ಪ್ರಕರಣ - ಮೊಹಮದ್ ಗವಾನ್ ಮದರಸಾ

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪು ಪಾರಂಪರಿಕ ಮದರಸಾಗೆ ನುಗ್ಗಿ, ಅದೇ ಕಟ್ಟಡದಲ್ಲಿ ಘೋಷಣೆಗಳನ್ನು ಕೂಗಿ, ಪೂಜೆ ನೆರವೇರಿಸಿದೆ ಎಂದು ದೂರಲಾಗಿದೆ. ಈ ಸಂಬಂಧ 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mob Enters Heritage Madrasa in Bidar
ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು
author img

By

Published : Oct 7, 2022, 11:24 AM IST

Updated : Oct 7, 2022, 11:33 AM IST

ಬೀದರ್: ಇಲ್ಲಿನ ಐತಿಹಾಸಿಕ ಮೊಹಮದ್ ಗವಾನ್ ಮದರಸಾ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದಲ್ಲದೇ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಪೂಜೆ ನೆರವೇರಿಸಿದ ಆರೋಪಕ್ಕೆ ಸಂಬಂಧ ಪಟ್ಟಂತೆ 9 ಮಂದಿ ವಿರುದ್ಧ ಬೀದರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಬುಧವಾರ ತಡ ರಾತ್ರಿ ದಸರಾ ಮೆರವಣಿಗೆಯಲ್ಲಿದ್ದ ನೂರಾರು ಮಂದಿಯ ಗುಂಪೊಂದು ಜೈ ಶ್ರೀ ರಾಮ್ ಘೋಷಣೆ ಕೂಗಿ ಮೊಹಮದ್ ಗವಾನ್ ಮದರಸಾ ಆವರಣದ ಬೀಗ ಮುರಿದು ಅಕ್ರಮವಾಗಿ ಪ್ರವೇಶಿಸಿತ್ತು. ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಬೀದರ್ ಪಟ್ಟಣ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.

ಬುಧವಾರ ಸಂಜೆ ಗುಂಪು ಮದರಸಾದ ಗೇಟ್​ಗಳ ಬೀಗ ಮುರಿದು ಒಳಗೆ ಪ್ರವೇಶಿಸಿತು. ನಂತರ ಕಟ್ಟಡದ ಒಂದು ಮೂಲೆಗೆ ತೆರಳಿ ಪೂಜೆ ನೆರವೇರಿಸಿತು. ಘಟನಾ ಸ್ಥಳದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಕಟ್ಟಡದ ಒಳಗೆ ಪ್ರವೇಶಿಸಲೆಂದು ಮೆಟ್ಟಿಲ ಮೇಲೆ ದೊಡ್ಡ ಗುಂಪು ನಿಂತಿರುವುದು ಕಾಣಿಸುತ್ತದೆ.

ಆರೋಪಿಗಳಾದ ನರೇಶ್ ಗೌಳಿ, ಪ್ರಕಾಶ್ ಮೆಕಾನಿಕ್, ಸಂಜು ಟೈಲರ್, ಅರುಣ್ ಗೌಳಿ, ಮುನ್ನ, ಸಾಗರ್, ಜಗದೀಶ್, ಗಣೇಶ್ ಗೌಳಿ ಹಾಗೂ ಗೊರಕ ಗೌಳಿ ಸೇರಿ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರಿಶ 1460ರಲ್ಲಿ ನಿರ್ಮಿಸಿರುವ ಮೊಹಮದ್ ಗವಾನ್ ಮದರಸಾ ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಕಟ್ಟಡಗಳ ಪಟ್ಟಿಯಲ್ಲಿಯೂ ಈ ಮದರಸಾ ಹೆಸರು ಸ್ಥಾನ ಪಡೆದಿದೆ.

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ ನಾಯಕ ಅಸಾದುದ್ದೀನ್ ಓವೈಸಿ ಘಟನೆಯನ್ನು ಖಂಡಿಸಿದ್ದು, ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಘಟನೆಗಳು ಮುಸ್ಲಿಮರ ಘನತೆಗೆ ಧಕ್ಕೆ ತರುತ್ತವೆ ಎಂದು ದೂರಿದ್ದಾರೆ.

ಇದನ್ನೂ ಓದಿ: ವಿಮೋಚನಾ ಪದಕ್ಕಿಂತಲೂ ಏಕೀಕರಣ ಸೂಕ್ತ: ಓವೈಸಿ

Last Updated : Oct 7, 2022, 11:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.