ಬೀದರ್: ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2015-16 ರಿಂದ 2018-19ರ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳ ಮಂಜೂರಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಿ 91 ಕೋಟಿ ರೂಪಾಯಿಗಳ ಅಕ್ರಮ ನಡೆಸಲಾಗಿದೆ ಎನ್ನುವುದಾದರೆ ಅದಕ್ಕೆ ಜಿಲ್ಲಾಧಿಕಾರಿ ಮಹದೇವ್ ಅವರೇ ಸಂಪೂರ್ಣ ಹೊಣೆಗಾರರು ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇಷ್ಟೊಂದು ಹಣ ಎಲ್ಲಿ ಹೋಯಿತು, ಯಾರ ಖಾತೆಗೆ ಹೋಯಿತು ಎಂಬ ಲೆಕ್ಕವನ್ನ ಖುದ್ದು ಜಿಲ್ಲಾಧಿಕಾರಿ ಜನರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಖಂಡ್ರೆ ಸವಾಲು ಹಾಕಿದ್ದಾರೆ. ಭಾಲ್ಕಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ವಸತಿ ಯೋಜನೆ ದುರ್ಬಳಕೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಪಾತ್ರ ಕುರಿತು ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಅವರು ಸ್ಪಷ್ಟೀಕರಣ ಕೇಳಿ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಯಾಗಿ ಶಾಸಕ ಈಶ್ವರ ಖಂಡ್ರೆ ಅವರು ಈ ಅವ್ಯವಹಾರದಲ್ಲಿ ಜಿಲ್ಲಾಧಿಕಾರಿಯನ್ನೆ ಹೊಣೆಗಾರರನ್ನಾಗಿ, ಕರ್ತವ್ಯ ಲೋಪದ ಆರೋಪ ಮಾಡಿ ಉತ್ತರಿಸಿ ಮರುಪತ್ರ ಬರೆದಿದ್ದಾರೆ.