ಬೀದರ್: ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ, ಶಿಕ್ಷಕರ ಬೋಧನಾಕ್ರಮ, ಇಂಗ್ಲಿಷ ತರಬೇತಿ ಬಗ್ಗೆ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳ ಜೊತೆ ಕುಳಿತು ಇಂಗ್ಲಿಷ್ ಓದಿಸಿ, ಗಣಿತ ಲೆಕ್ಕಗಳ ಜ್ಞಾನವನ್ನು ಪರಿಶೀಲಿಸಿದರು. ಇಂಗ್ಲಿಷ್ ಅಕ್ಷರ ಮಾಲೆಗಳನ್ನು ಓದಲು ತಡಕಾಡಿದ ವಿದ್ಯಾರ್ಥಿಗಳನ್ನು ಕಂಡು ಶಿಕ್ಷಕರ ಮೇಲೆ ಕೋಪಗೊಂಡಿದ್ದಾರೆ.
ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಕುರಿತು ತರಬೇತಿ ನೀಡಿ, ಈ ಭಾಗದ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.