ETV Bharat / state

ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಡಾ. ಸುಧಾಕರ್ ಕೆಂಡಾಮಂಡಲ - sudhskar talk about bidar brims hospital issue

ಉತ್ತಮ ಗುಣಮಟ್ಟದ ವಸ್ತುಗಳನ್ನು ಕಳುಹಿಸಿದ್ದರೂ ನೀಡದ್ದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಜಹೀರಾ ನಸೀಂ ಅವರಿಗೆ ಸೂಚನೆ ನೀಡಿದರು..

bidar-brims-hospital-issue
ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಸುಧಾಕರ್ ಕೆಂಡಾಮಂಡಲ
author img

By

Published : Apr 30, 2021, 3:36 PM IST

ಬೀದರ್ : ಬ್ರಿಮ್ಸ್ ಕಾಲೇಜು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೆಂಡಾಮಂಡರಾಗಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಮಾಡದ ನಿರ್ದೇಶಕರನ್ನು ತೀವ್ರ ತರಾಟೆ ತೆಗೆದುಕೊಂಡರು.

ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಸುಧಾಕರ್ ಕೆಂಡಾಮಂಡಲ..

ಓದಿ: ಬ್ರಿಮ್ಸ್​ ಆಸ್ಪತ್ರೆ ಕೊರೊನಾ ವಾರ್ಡ್‌ಗೆ ಡಿಸಿ ಭೇಟಿ, ಸೋಂಕಿತರ ಯೋಗಕ್ಷೇಮ ವಿಚಾರಣೆ

ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣ ಹಾಗೂ ಕ್ರಮಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

700ಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ಮಾಹಿತಿ ಸರಿಯಾಗಿ ನೀಡಲು ವಿಫಲವಾಗಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾತ್ರಿಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ರೋಗಿ ಸಂಬಂಧಿಗಳು ವಾರ್ಡ್‌ಗೆ ಬಿಡುತ್ತಿರುವುದರ ಬಗ್ಗೆ ಸಿಇಒ ಅವರನ್ನು ತರಾಟೆ ತೆಗೆದುಕೊಂಡ ಸಚಿವರು, ರೋಗ ಹರಡುವಿಕೆ ತಡೆಯಲು ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸಬೇಕು.

ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಔಷಧಗಳ ಕಿಟ್ ನೀಡದಿರುವ ಮತ್ತು ನಿಗಾ ವ್ಯವಸ್ಥೆ ರೂಪಿಸದಿರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು, ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೆಲಸಕ್ಕೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ತೆಲಂಗಾಣ ಮತ್ತು ಆಂಧ್ರದ ಸೋಂಕಿತರು ಬಂದರೂ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಇದೆ. ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಹೇಗೆ?. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜಿಸಬೇಕು ಎಂದು ಸೂಚಿಸಿದರು.

ಇದು ಯುದ್ಧದ ಸಮಯ, ಇಂತಹ ಸಂದರ್ಭದಲ್ಲಿ ಹೌಸ್ ಸರ್ಜನ್ಸ್, ರೆಸಿಡೆಂಟ್ ಡಾಕ್ಟರ್ಸ್, ಪಿಜಿ ಸ್ಟೂಡೆಂಟ್ಸ್‌ಗಳು ಕಡ್ಡಾಯವಾಗಿ ಕೋವಿಡ್ ಕರ್ತವ್ಯದಲ್ಲಿ ಪಾಲ್ಗೊಳ್ಳಬೇಕು. ಟೆಲಿಕಾಲ್, ಕೌನ್ಸೆಲಿಂಗ್ನಂತಹ ಕರ್ತವ್ಯದಲ್ಲಿ ನಿಯೋಜನೆ ಮಾಡಬೇಕು ಎಂದು ತಾಕೀತು ಮಾಡಿದರು.

ಪಿಪಿಇ ನೀಡದಕ್ಕೆ ತರಾಟೆ : ವಾಡ್೯ ಮತ್ತು ಐಸಿಯುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಪಿಪಿಇ ಕಿಟ್ ನೀಡದ್ದನ್ನು ಕಂಡು ಸಚಿವರು ಕೆಂಡಾಮಂಡಲರಾದರು.

ಉತ್ತಮ ಗುಣಮಟ್ಟದ ವಸ್ತುಗಳನ್ನು ಕಳುಹಿಸಿದ್ದರೂ ನೀಡದ್ದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಜಹೀರಾ ನಸೀಂ ಅವರಿಗೆ ಸೂಚನೆ ನೀಡಿದರು.

ಸಿಟಿ ಸ್ಕ್ಯಾನರ್ ಕೆಲಸ ಮಾಡದ್ದನ್ನೂ ತಿಳಿದ ಸಚಿವರು, ಸಂಜೆ ವೇಳೆಗೆ ಅದನ್ನು ಸುಸ್ಥಿತಿಗೆ ತರಬೇಕು. ಹೆಚ್ಚುವರಿಯಾಗಿ ಮತ್ತೊಂದು ಸಿಟಿ ಸ್ಕ್ಯಾನರ್ ಖರೀದಿಸಲು ಸ್ಥಳದಲ್ಲೇ ಆದೇಶ ನೀಡಿದರು. ಉಸ್ತುವಾರಿ ಸಚಿವ ಚೌಹಾಣ್, ಸಂಸದರಾದ ಭಗವಂತ ಖೂಬಾ, ಶಾಸಕರುಗಳಾದ ಬಂಡೆಪ್ಪ ಕಾಶೆಂಪೂರ್, ರಹೀಂಖಾನ್ ಮತ್ತಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.