ETV Bharat / state

ಸರ್ಕಲ್​ನಲ್ಲೇ ಆತ್ಮಹತ್ಯೆ ಯತ್ನದ ಹೈಡ್ರಾಮಾ - ವಿಡಿಯೋ - suicide Hydrama

ಮುಖ್ಯ ರಸ್ತೆಯಲ್ಲೇ ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಆತ್ಮಹತ್ಯೆ ಹೈಡ್ರಾಮಾ
author img

By

Published : Oct 1, 2019, 5:03 AM IST

ಬೀದರ್: ವ್ಯಕ್ತಿವೋರ್ವ ಕೊರಳಿಗೆ ಬಟ್ಟೆ ಸುತ್ತಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ಮಾಡಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ

ನಗರದ ಬಸವೇಶ್ವರ ವೃತದಲ್ಲಿ ಭಾಲ್ಕಿ ಪಟ್ಟಣದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ಅಡೆಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ ವ್ಯಕ್ತಿ. ನಡುರಸ್ತೆಯಲ್ಲಿಯೇ ನಾನು ಜೀವ ಬಿಡುತ್ತೀನಿ ಎಂದು ರಂಪಾಟ ಆರಂಭಿಸಿದ್ದ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಮಾರ್ಕೇಟ್ ಪೊಲೀಸ್ ಠಾಣೆ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಬಸವರಾಜ್ ಮಾತ್ರ ಹೈಡ್ರಾಮ ಮುಂದುವರಿಸಿದ್ದ. ಇದರಿಂದಾಗಿ ಕೆಲಕಾಲ ನಯಾಕಮಾನ್, ಗಾಂಧಿಗಂಜ, ಹೈದ್ರಾಬಾದ್ ರೋಡ್​ನಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ನಂತರ ರಕ್ಷಣೆಗೆ ಮುಂದಾದಾಗ ಬಸವರಾಜ್ ವೃತದ ಮೇಲಿಂದ ಕೆಳಗೆ ಜಿಗಿದು ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೀದರ್ ನಲ್ಲಿ ತಲೆಕೆಟ್ಟ ವ್ಯಕ್ತಿಯ ಆತ್ಮಹತ್ಯೆ ಹೈಡ್ರಾಮಾ- Live Video...!

ಬೀದರ್:
ನಡು ರಸ್ತೆಯಲ್ಲಿ ಕೊರಳಿಗೆ ಬಟ್ಟೆಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೇದರಿಕೆ ಒಡ್ಡು ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕರನ್ನು ಆತಂಕಕ್ಕೊಳಪಡಿಸಿ ಹೈಡ್ರಾಮ ಮಾಡಿದ ಘಟನೆ ನಡೆದಿದೆ.

ನಗರದ ಬಸವೇಶ್ವರ ವೃತದಲ್ಲಿ ಭಾಲ್ಕಿ ಪಟ್ಟಣದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿರುವ ಬಸವರಾಜ ಅಡೆಪ್ಪ ಎಂಬಾತ ಚೌಕ್ ನ ಕಬ್ಬಿಣದ ಸಲಾಕೆಗೆ ಬಟ್ಟೆಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿರುಚಾಡಿದ. ಅಲ್ಲದೆ ಆ ಒಬ್ಬ ವ್ಯಕ್ತಿಯನ್ನು ಇಲ್ಲಿಗೆ ಕರೆಯಿಸಿ ಇಲ್ಲ ಅಂದ್ರೆ ನನ್ನ ಜೀವ ಬಿಟ್ಟಕೊಡ್ತಿನಿ ಎಂದು ರಂಪಾಟ ಆರಂಭಿಸಿದ್ದಾನೆ.

ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಾರ್ಕೇಟ್ ಪೊಲೀಸ್ ಠಾಣೆ ಸಿಬ್ಬಂಧಿ ಎಷ್ಟೇ ಪ್ರಯತ್ನ ಪಟ್ಟರು ಬಗ್ಗದ ಬಸವರಾಜ್ ಆತ್ಮ ಹತ್ಯೆಗೆ ಯತ್ನ ಮಾಡುತ್ತ ಹೈ ಡ್ರಾಮ ಮಾಡಿದನು. ಇದರಿಂದಾಗಿ ಕೆಲ ಕಾಲ ನಯಾಕಮಾನ್, ಗಾಂಧಿಗಂಜ, ಹೈದ್ರಾಬಾದ್ ರೋಡ್ ನಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು.

ನಂತರ ಪೊಲೀಸ್ ಸಿಬ್ಬಂಧಿಯೊಬ್ಬ ಬಸವೇಶ್ವರ ವೃತ ಜೋರಾಗಿ ಹತ್ತಿದ್ದಾರೆ. ಇದರಿಂದ ವಿಚಲಿತನಾದ ಬಸವರಾಜ್ ವೃತದ ಮೇಲಿಂದ ಕೆಳಗೆ ಜೀಗಿದು ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಆತ್ಮಹತ್ಯೆ ಗೆ ಕಾರಣ ಎನು ಯಾರು ಆ ಒಬ್ಬ ವ್ಯಕ್ತಿ ಎಂಬುದರ ಕುರಿತು ಇನ್ನೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.