ETV Bharat / state

ಸೆ.18ರಂದು ಸದಾಶಿವ ಆಯೋಗ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ - madiga dandor protest

ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಸೆ.18ರಂದು ಸದಾಶಿವ ಆಯೋಗ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ ಹೇಳಿದರು.

Madiga dandora horata samiti protest on sep 18
ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ
author img

By

Published : Sep 13, 2020, 10:41 PM IST

ಬಸವಕಲ್ಯಾಣ (ಬೀದರ್): ಒಳ ಮಿಸಲಾತಿಗಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಒತ್ತಾಯಿಸಿ ಸೆಪ್ಟೆಂಬರ್ 18ರಂದು ಬೆಂಗಳೂರನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುರು ಎಂದು ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ ತಿಳಿಸಿದರು.

ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ

ನಗರದ ಕೆಇಬಿ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ದಂಡೋರ ಹೋರಾಟ ಸಮಿತಿ ಸಭೆ ಮತ್ತು ತಾಲೂಕು ಸಮಿತಿ ನೂತನ ಅಧ್ಯಕ್ಷರ ಸಂಜೀವಕುಮಾರ ಸಂಗನೂರೆ ಅವರ ಸನ್ಮಾನ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಒತ್ತಾಯಿಸಿದ್ದೇವೆ. ನಮ್ಮ ಬೇಡಿಕೆಗೆ ಸರ್ಕಾರಗಳು ಸ್ಪಂದಿಸದ ಹಿನ್ನೆಲೆ ಸಮಿತಿಯ ರಾಷ್ಟೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ ಕರೆ ಮೇರೆಗೆ ರಾಜ್ಯದ 224 ಶಾಸಕರ ನಿವಾಸದ ಮುಂದೆ 14ರಂದು ಧರಣಿ ನಡೆಸಿ, ಮನವಿ ಪತ್ರ ಸಲ್ಲಿಸಲಾಗುವದು ಎಂದರು.

21 ರಿಂದ ನಡೆಯಲಿರುವ ಅಧಿವೇಶನದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಬೆಂಬಲಿಸಬೇಕು ಎಂದು ಮನವಿ ಮಾಡಲಾಗುವುದು. ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಪ್ರದೀಪ ಹೆಗಡೆ, ತಾಲೂಕು ಅಸ್ಪೃಶ್ಯ ಸಮುದಾಯ ಸಮನ್ವಯ ಸಮಿತಿ ಅಧ್ಯಕ್ಷ ಮನೋಹರ್ ಮೈಸೆ, ಪ್ರಧಾನ ಕಾರ್ಯದರ್ಶಿ ಸುರೇಶ ಮೋರೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೇತ್ರೆ, ಹಿರಿಯ ಮುಖಂಡ ಸೂರ್ಯಕಾಂತ ಮದಕಟ್ಟಿ, ನಗರಸಭೆ ಮಾಜಿ ಸದಸ್ಯ ಶಿರೋಮಣಿ ನೀಲನೂರ ಇತರ ಪ್ರಮುಖರು ಮಾತನಾಡಿದರು.

ನಗರಸಭೆ ಸದಸ್ಯ ಮಾರುತಿ ಲಾಡೆ, ಪ್ರಮುಖರಾದ ಮನೋಹರ್ ಮೋರೆ, ನಾಗನಾಥ ವಾಡೇಕರ್, ತಾ.ಪಂ ಸದಸ್ಯ ಗುರುನಾಥ ಸೋನಕೆ, ನೀಲಕಂಠ ಭೆಂಡೆ, ದತ್ತು ಲಾಡೆ, ಅಶೋಕ ಸಂಗನೂರೆ, ಮನೋಜ ತಂಬುರ್ಚಿ, ರಮೇಶ ಚೌಧರಿ, ರಾಜೀವ ಮುಜನಾಯಕ, ಸುರೇಶ ಮುಜನಾಯಕ ಇತರರು ಭಾಗವಹಿಸಿದ್ದರು.

ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ ಉಮ್ಮಾಪೂರೆ ನಿರೂಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.