ETV Bharat / state

ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರೇಮಿಗಳ ದಿನಕ್ಕೂ ಮುನ್ನವೇ ನೇಣಿಗೆ ಶರಣಾದ ಜೋಡಿ - ಬೀದರ್​ನಲ್ಲಿ ಪ್ರೇಮಿಗಳು ಆತ್ಮಹತ್ಯೆ

ಅಂತರ್ಜಾತಿ ವಿವಾಹಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುವ ಪ್ರೇಮಿಗಳು ನೇಣಿಗೆ ಶರಣಾದ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ.

Lovers committed suicide in Basavakalyan, couple suicide in Bidar, Bidar crime news, ಬಸವಕಲ್ಯಾಣದಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣು, ಬೀದರ್​ನಲ್ಲಿ ಪ್ರೇಮಿಗಳು ಆತ್ಮಹತ್ಯೆ, ಬೀದರ್​ ಅಪರಾಧ ಸುದ್ದಿ,
ನೇಣಿಗೆ ಶರಣಾದ ಪ್ರೇಮಿಗಳು
author img

By

Published : Feb 9, 2022, 2:15 PM IST

ಬಸವಕಲ್ಯಾಣ: ಅಂತರ್ಜಾತಿ ವಿವಾಹಕ್ಕೆ ಕುಟುಂಬಸ್ಥರ ವಿರೋಧದ ಕಾರಣಕ್ಕೆ ಮನನೊಂದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಲಖೋರಾ ತಾಂಡದ ಬಳಿ ನಡೆದಿದೆ.

ನೆರೆಯ ಕಲಬುರಗಿ ಜಿಲ್ಲೆ ಕಮಲಾಪೂರ ತಾಲೂಕಿನ ಓಕಳಿ ಗ್ರಾಮದ ನಿವಾಸಿ ರಮೇಶ ಭೀಮಶಾ ಬೇಡರ್ (28) ಹಾಗೂ ಭೀಮಾಬಾಯಿ ಅಶೋಕ ರಾಠೋಡ (19) ನೇಣು ಬಿಗಿದುಕೊಂಡು ಸಾವಿಗೆ ಶರಣಾದವರು.

ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತಿದ್ದ ಇವರು ಮದುವೆಯಾಗಲು ಇಚ್ಚಿಸಿದ್ದರಂತೆ. ಆದರೆ ಇಬ್ಬರ ಜಾತಿ ಬೇರೆ ಬೇರೆ ಆಗಿದ್ದು ಪ್ರೇಮ ವಿವಾಹಕ್ಕೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಎರಡೂ ಕುಟುಂಬದ ನಡುವೆ ಜಗಳವೂ ನಡೆದಿತ್ತು. ನಂತರ ಪರಸ್ಪರ ರಾಜಿ ಸಂಧಾನದ ಮೂಲಕ ಗಲಾಟೆ ಬಗೆಹರಿಸಿ ಇಬ್ಬರೂ ದೂರ ಇರುವಂತೆ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗಂಡನಿಗೆ ಹೆಂಡ್ತಿಯೇ ಸಾಥ್: ಅಸಹಾಯಕ ಮಹಿಳೆ ಮೇಲೆ ಪತಿ ಅತ್ಯಾಚಾರ ಮಾಡುತ್ತಿರುವ ವಿಡಿಯೋ ತೆಗೆದ ಪತ್ನಿ!

ಈ ಬೆಳವಣಿಗೆಯಿಂದ ನೊಂದ ಪ್ರೇಮಿಗಳು ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಬಿಟ್ಟಿರಲಾರೆವು ಎಂಬಂತೆ ಇಬ್ಬರೂ ಒಂದೇ ಕೊಂಬಿಗೆ ವೇಲ್​ನಿಂದ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಈ ಸುದ್ದಿ ತಿಳಿದ ಮುಡುಬಿ ಠಾಣೆ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.