ಬೀದರ್: ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೇಯಸಿಯ ಸಾವಿನ ಬಗೆಗಿನ ಸುದ್ದಿ ಅರಗಿಸಿಕೊಳ್ಳಲಾಗದೆ ಮಾನಸಿಕವಾಗಿ ನೊಂದ ಯುವಕನೊಬ್ಬ ಮೊಬೈಲ್ ಟವರ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಮನಾಬಾದ್ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹೊರವಲಯದ ವಾಂಜರಿ ಗ್ರಾಮದ ನಾಗೇಶ್ ರೆಡ್ಡಿ(24) ಮೃತ ಯುವಕ. ನಾಗೇಶ್ ಪ್ರೀತಿಸುತ್ತಿದ್ದ ಯುವತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಯುವಕ, ಪ್ರೇಯಸಿ ಅಂತ್ಯ ಸಂಸ್ಕಾರ ಮಾಡಿದ ಸ್ಮಶಾನದಲ್ಲಿನ ಮೊಬೈಲ್ ಟವರ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಇವರಿಬ್ಬರ ಪ್ರೀತಿ ವಿಚಾರ ಇತ್ತೀಚೆಗಷ್ಟೇ ಬಯಲಾಗಿತ್ತು. ಈ ನಡುವೆ ಯುವತಿ ಅನಾರೋಗ್ಯದಿಂದ ಸಾವನಪ್ಪಿದ್ದಳು. ಯುವತಿಯ ಅಗಲಿಕೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಲವ್ ಕಹಾನಿ ವೈರಲ್ ಆಗಿದೆ.