ETV Bharat / state

ಸೂರ್ಯ-ಚಂದ್ರ ಇರೋವರೆಗೂ ಬೆಳಗಾವಿ ನಮ್ಮದೇ: ಸವದಿ

ಸೂರ್ಯ, ಚಂದ್ರ ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೆ ಬೆಳಗಾವಿ ನಮ್ಮ ಕರ್ನಾಟಕಕ್ಕೆ ಸೇರಿರುತ್ತದೆ ಎಂದು ಮಹಾ ಡಿಸಿಎಂಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

lakshman savadi reaction about maharashtra DCM Statement
ಸೂರ್ಯ-ಚಂದ್ರ ಇರೋವರೆಗೂ ಬೆಳಗಾವಿ ನಮ್ಮದೆ : ಸವದಿ
author img

By

Published : Nov 20, 2020, 10:24 PM IST

ಬಸವಕಲ್ಯಾಣ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್​ ಪವಾರ್​​ ನೀಡಿರುವ ಹೇಳಿಕೆ ಉದ್ಧಟತನದಿಂದ ಕೂಡಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂರ್ಯ, ಚಂದ್ರ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಬೆಳಗಾವಿ ನಮ್ಮ ಕರ್ನಾಟಕಕ್ಕೆ ಸೇರಿರುತ್ತದೆ ಎಂದು ಮಹಾ ಡಿಸಿಎಂಗೆ ತಿರುಗೇಟು ನೀಡಿದರು.

ಸೂರ್ಯ-ಚಂದ್ರ ಇರೋವರೆಗೂ ಬೆಳಗಾವಿ ನಮ್ಮದೇ: ಸವದಿ

ರಾಜ್ಯದಲ್ಲಿ ಮರಾಠಿ ಭಾಷಿಕರನ್ನು ಓಲೈಸುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನೀಡಿರುವ ಬಂದ್ ಕರೆ ಹಿಂಪಡೆಯಬೇಕು. ನಾವು ಭಾಷೆ ಆಧಾರದಲ್ಲಿ ನಿಗಮ ಸ್ಥಾಪನೆ ಮಾಡಿಲ್ಲ. ಸಾವಿರಾರು ವರ್ಷಗಳಷ್ಟು ಇತಿಹಾಸ ಉಳ್ಳ ನಮ್ಮ ರಾಜ್ಯದ ಮರಾಠ ಸಮುದಾಯದ ಜನರು ಇಲ್ಲೇ ಹುಟ್ಟಿದ್ದಾರೆ, ಇಲ್ಲೇ ಬೆಳೆದಿದ್ದಾರೆ. ಹೀಗಾಗಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮರಾಠ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗಿದೆ. ಇದನ್ನು ಕನ್ನಡಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.