ಬಸವಕಲ್ಯಾಣ: ಮನೆ ಬಳಿ ಆಟವಾಡುತಿದ್ದ ಬಾಲಕನ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ಮಿರ್ಜಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 5 ವರ್ಷದ ಸೋಹಮ ನಾಗನಾಥ ಕಾಂಬಳೆ ನಾಯಿ ಕಡಿತಕ್ಕೆ ಒಳಗಾದ ಬಾಲಕ. ರಸ್ತೆಯಲ್ಲಿ ಆಟವಾಡುವಾಗ ಬೀದಿ ನಾಯಿಯೊಂದು ಬಾಲಕ ಮೇಲೆ ದಿಢೀರನೆ ದಾಳಿ ನಡೆಸಿದ್ದು, ಬಾಲಕನ ತುಟಿಗಳಿಗೆ ಗಂಭೀರ ಗಾಯಗೊಳಿಸಿದೆ.
ಬಾಲಕನಿಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕಳುಹಿಸಲಾಗಿದೆ.