ಬಸವಕಲ್ಯಾಣ: ಅಂಗನವಾಡಿ ಕೇಂದ್ರದಲ್ಲಿ ಗ್ರಾಮಸ್ಥನೊಂದಿಗೆ ರಾಸಲೀಲೆ ನಡೆಸಿದ್ದ ಶಿಕ್ಷಕಿಯ ಗೌರವ ಸೇವೆಯನ್ನು ಹಿಂಪಡೆದು (ವಜಾಗೊಳಿಸಿ) ಆದೇಶ ಹೊರಡಿಸಲಾಗಿದೆ.
ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ತಾಲೂಕಿನ ಲಾಡವಂತಿ ವಾಡಿಯ ಅಂಗನವಾಡಿ ಶಿಕ್ಷಕಿಯನ್ನು ರಾಸಲೀಲೆ ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಸೇವೆಯಿಂದ ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಓದಿಗಾಗಿ: ಅ, ಆ, ಇ, ಈ ಕಲಿಸಬೇಕಾದ ಜಾಗದಲ್ಲಿ ರಾಸಲೀಲೆ... ಬಸವಕಲ್ಯಾಣದ ವಿಡಿಯೋ ಫುಲ್ ವೈರಲ್
ಏಪ್ರಿಲ್ 16ರಂದು ಈಟಿವಿ ಭಾರತದಲ್ಲಿ ಬಿತ್ತರಿಸಿದ್ದ ವಿಸ್ತೃತ ವರದಿ ಹಿನ್ನೆಲೆಯಲ್ಲಿ ಬುಧವಾರ ಲಾಡವಾಂತಿ ವಾಡಿಗೆ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ತನಿಖೆ ಕೈಗೊಂಡಿದ್ದ, ಶಿಕ್ಷಕಿ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಸರ್ಕಾರಿ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ನಡೆಸಿದ ಆರೋಪದಲ್ಲಿ ಸತ್ಯಾಂಶ ಕಂಡುಬಂದ ಹಿನ್ನೆಲೆಯಲ್ಲಿ ಶಿಕ್ಷಕಿಯ ಗೌರವ ಸೇವೆಯ ಮಾನ್ಯತೆ ಹಿಂಪಡೆದು ಆದೇಶ ಹೊರಡಿಸಿದ್ದಾರೆ.