ETV Bharat / state

ಕದ್ದುಮುಚ್ಚಿ ಫೋಟೋ ಕ್ಲಿಕ್ಕಿಸಿದ ಗುಮಾನಿ: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ! - kannada news

ತಪ್ಪು ಗ್ರಹಿಕೆಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆ
author img

By

Published : May 5, 2019, 12:02 PM IST

ಬೀದರ್: ತನ್ನ ಫೋಟೊ ಕ್ಲಿಕ್ಕಿಸಿದ್ದಾನೆಂದು ಶಂಕೆ ವ್ಯಕ್ತಪಡಿಸಿ ಯುವಕನೋರ್ವನ ಮತ್ತೋರ್ವ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಚಟನಳ್ಳಿ ಗ್ರಾಮದ ಯುವಕ ಆಕಾಶ ಬೆಣ್ಣೆ ಎಂಬಾತ ತನ್ನ ಮೊಬೈಲ್​ನಲ್ಲಿ ಕದ್ದು ಫೋಟೋ ಕ್ಲಿಕ್ಕಿಸಿದ್ದಾನೆ ಎಂಬ ಅನುಮಾನದಿಂದ ಅದೇ ಗ್ರಾಮದ ಮಹೇಶ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಊರ ಚಾವಡಿ ಮೇಲೆ ಕುಳಿತಿದ್ದ ವೇಳೆ ಆಕಾಶ್ ತನ್ನ ಕೈಯಲ್ಲಿದ್ದ ಮೊಬೈಲ್​ನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಇದನ್ನೇ ತಪ್ಪಾಗಿ ಗ್ರಹಿಸಿದ ಮಹೇಶ್ ಕೋಪದಿಂದ ಆಕಾಶ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಆಕಾಶ್​ನ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:ಫೋಟೊ ಕ್ಲೀಕ್ಕಿಸಿದ್ದಾನೆಂದು ಗೃಹಿಸಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ...!

ಬೀದರ್:
ಮೊಬೈಲ್ ನಲ್ಲಿ ಕದ್ದು ಫೋಟೊ ಕ್ಲಿಕ್ಕಿಸಿದ್ದಾನೆಂದು ಗೃಹಿಸಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೀದರ್ ನಲ್ಲಿ ನೆಡೆದಿದೆ.

ತಾಲೂಕಿನ ಚಟನಳ್ಳಿ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಅಮಾಯಕ ಯುವಕ ಆಕಾಶ ಬೆಣ್ಣೆ ಎಂಬಾತನ ಮೇಲೆ ಅದೇ ಗ್ರಾಮದ ಮಹೇಶ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಊರ ಚಾವಡಿ ಮೇಲೆ ಕುತಿದ್ದಾಗ ಆಕಾಶ ತನ್ನ ಕೈಯಲ್ಲಿದ್ದ ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಇದನ್ನೆ ತಪ್ಪಾಗಿ ಗೃಹಿಸಿಕೊಂಡ ಮಹೇಶ ನನ್ನ ಫೋಟೊ ಕ್ಲೀಕ್ಕಿಸ್ತಿಯಾ ಎಂದು ಸಿಟ್ಟುಗೊಂಡು ಸಿಕ್ಕಾಪಟ್ಟೆ ಹಲ್ಲೆ ಮಾಡಿದ್ದಾನೆ. ತಲೆ ಹಾಗೂ ಮುಖದ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡ ಆಕಾಶನನ್ನು ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಟ್-೧ ಹಲ್ಲೆಗೊಳಗಾದ ಯುವಕನ ತಾಯಿBody:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.