ETV Bharat / state

ಬಸವಕಲ್ಯಾಣ: ಸೋಂಕಿತ ತಹಶೀಲ್ದಾರರ ವಾಹನ ಚಾಲಕನಿಗೂ‌ ಕೊರೊನಾ

ಎರಡು ದಿನಗಳ ಹಿಂದೆ ತಹಶೀಲ್ದಾರ್​ಗೆ ಕೊರೊನಾ ವಕ್ಕರಿಸಿತ್ತು. ಈಗ ಅವರ ವಾಹನ ಚಾಲಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

Basavakalyana corona case
Basavakalyana corona case
author img

By

Published : Jul 31, 2020, 11:26 PM IST

ಬಸವಕಲ್ಯಾಣ(ಬೀದರ್​) : ನಗರ ಸೇರಿ ತಾಲೂಕಿನಲ್ಲಿ ಕೊರೊನಾ ಕಾಟ ಮುಂದುವರೆದಿದ್ದು, ಕೊರೊನಾ ಸೋಂಕಿಗೆ ಒಳಗಾಗಿದ್ದ ತಹಶೀಲ್ದಾರ್ ಅವರ ವಾಹನ ಚಾಲಕನಿಗೂ ಸದ್ಯ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 424ಕ್ಕೆ ಏರಿಕೆಯಾಗಿದೆ.

ತಾಲೂಕಿನ ಮುಚಳಂಬ ಗ್ರಾಮದವರಾಗಿರುವ ಇವರು (28 ವರ್ಷದ ಯುವಕ) ತಹಶೀಲ್ದಾರರ ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ತಹಶೀಲ್ದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಾಲಕನಿಗೂ ತಪಾಸಣೆ ಮಾಡಲಾಗಿತ್ತು. ಸದ್ಯ ಇವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.ಇನ್ನುಳಿದಂತೆ ತಾಲೂಕಿನ ತಡೋಳಾ ಗ್ರಾಮದ 32 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢಪಟ್ಟಿದೆ.

ವ್ಯಕ್ತಿ ಬಲಿ: ಕಿಲ್ಲರ್ ಕೊರೊನಾಗೆ ನಗರದ ಸರ್ವೋದಯ ಕಾಲೋನಿಯ 58 ವರ್ಷದ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳಿಂದ ಬೀದರ್ ಆಸ್ಪತ್ರೆಗೆ ದಾಖಲಾಗಿದ್ದ ಇವರು, 29 ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.