ಬೀದರ್ : ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ದೇಶವನ್ನು ಲಾಕ್ಡೌನ್ ಮಾಡಲಾಗಿದೆ ಇದರಿಂದ ಬೆಳೆದು ನಿಂತಿರುವ ಕಲ್ಲಂಗಡಿಯನ್ನು ಕೊಳ್ಳಲು ಮಾರುಕಟ್ಟೆಯೇ ಇಲ್ಲದೆ ರೈತರು ಕಂಗಾಲಾಗಿದ್ದಾರೆ.
ಭಾಲ್ಕಿ ತಾಲೂಕಿನ ಖಟಕಚಿಂಚೊಳಿ ಗ್ರಾಮದ ಸುರೇಶ ಅಲ್ಲೂರೆ ಎಂಬ ರೈತ ತನ್ನ ಎರಡು ಎಕರೆ ಜಮಿನಿನಲ್ಲಿ ಬೆಳೆದ ಕಲ್ಲಂಗಡಿಯನ್ನು ಕೊಳ್ಳಲು ಮಾರುಕಟ್ಟೆಯೇ ಇಲ್ಲದನ್ನು ಕಂಡು ಕಂಗಾಲಾಗಿದ್ದಾನೆ. ಅಂದಾಜು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಹೊಲದಲ್ಲೆ ನಾಶವಾಗುತ್ತಿರುವುದರಿಂದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಅಂದಾಜು 4 ಲಕ್ಷ ಮೌಲ್ಯದ ಇಳುವರಿಯ ನಿರೀಕ್ಷೆ ಇಟ್ಟುಕೊಂಡ ರೈತನ ಕಲ್ಲಂಗಡಿಗೆ ಸದ್ಯ ಮಾರುಕಟ್ಟೆಯಲ್ಲಿ 3 ರುಪಾಯಿಗೆ ಕೆ.ಜಿ ಕೆಳ್ತಿದ್ದಾರೆ. ಪ್ರತಿ ವರ್ಷ ಬೆಸಿಗೆಯಲ್ಲಿ 30 ರಿಂದ 40 ರೂಪಾಯಿ ಕೆಜಿ ಕಲ್ಲಂಗಡಿ ಮಾರಾಟವಾಗ್ತಿತ್ತು. ಆದ್ರೆ ಕೊರೊನಾ ವೈರಸ್ ಎಫೇಕ್ಟ್ ನಿಂದಾಗಿ ಮಾರುಕಟ್ಟೆ ಸ್ಥಬ್ದವಾಗಿ ರೈತರು ಬೆಳೆದ ಕಲ್ಲಂಗಡಿ ಬೀದಿಪಾಲಾಗುವ ಹಂತಕ್ಕೆ ತಲುಪಿದ್ದು ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ರೈತರ ಸಹಾಯಕ್ಕೆ ಬರಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.