ಬಸವಕಲ್ಯಾಣ: ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಕುಟುಂಬದ ಆರ್ಥಿಕ ಸಧೃಡತೆಗೆ ಮುಂದಾಗಬೇಕು ಎಂದು ಮೈರಾಡ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಶಂಕರ ಉಜಳಂಬೆ ಸಲಹೆ ನೀಡಿದರು.
ತಾಲೂಕಿನ ಗುಂಡೂರ ಗ್ರಾಮದಲ್ಲಿ ಮೈರಾಡ ಸಂಸ್ಥೆ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಚ್‌ಆರ್‌ಡಿಪಿ ಯೋಜನೆಯಡಿ ಆಯೋಜಿಸಿದ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಉದ್ಯೋಗಕ್ಕೆ ಪ್ರೋತ್ಸಾಹಿಸಿ, ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಹೊಲಿಗೆ ಯಂತ್ರ ವಿತರಿಸಲಾಗಿದ್ದು, ಪ್ರತಿಯೊಬ್ಬರು ಇವುಗಳ ಸದ್ದುಪಯೋಗ ಪಡೆದುಕೊಂಡು ಸ್ವಾಲಂಬಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಬಳಿಕ ಸಂಸ್ಥೆ ಕ್ಷೇತ್ರ ಸಂಯೋಜಕರಾದ ಪ್ರಕಾಶ ಡಿ.ಕೆ, ಮಾತನಾಡಿ, ಕುಟುಂದ ಆರ್ಥಿಕ ಸಮಸ್ಯೆಗೆ ನಿರುದ್ಯೋಗ ಸಮಸ್ಯೆಯೇ ಪ್ರಮುಖವಾಗಿದ್ದು, ನಿರುದ್ಯೋಗ ಸಮಸ್ಯೆಗೆ ಸ್ವಯಂ ಉದ್ಯೋಗ ಸಹಕಾರಿಯಾಗಿದ್ದು, ಮನೆಯಲ್ಲಿಯೇ ಸದಾ ಉಳಿಯುವ ಮಹಿಳೆಯರಿಗೆ ಸಿಗುವ ಸಮಯವನ್ನು ಬಳಸಿಕೊಂಡು ಹೊಲಿಗೆ ಉದ್ಯೋಗ ಮಾಡುವ ಮೂಲಕ ಆರ್ಥಿಕ ಸಧೃಡತೆ ಹೊಂದಬೇಕು ಎಂದು ತಿಳಿಸಿದರು.
ಈ ವೇಳೆ ಸಿಎಂಆರ್‌ಸಿ ವ್ಯವಸ್ಥಾಪಕ ಶಿವರಾಜ ಬಿರಾದಾರ, ಸಂಸ್ಥೆ ಸಿಬ್ಬಂದಿಗಳಾದ ಭಾಗ್ಯಶ್ರೀ ಚಂದ್ರಕಾಂತ, ಮೀನಾಕ್ಷಿ ಬಿರಾದಾರ, ಮಲ್ಲಮ್ಮ ಸೇರಿದಂತೆ ಸಂಸ್ಥೆ ಸಿಬ್ಬಂದಿಗಳು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.