ಬೀದರ್: ಇಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಜನರು ಕೊರೊನಾದಿಂದ ತೀವ್ರ ಸ್ವರೂಪದ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡು ಬದುಕುವ ಇವರ ಮಕ್ಕಳಲ್ಲೀಗ ಅಪೌಷ್ಟಿಕತೆ ಸಮಸ್ಯೆ ಎದುರಾಗಿದೆ.
ಮಹಿಳಾ ಮತ್ತು ಮಕ್ಕಳ ಕುಟುಂಬ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ ಮಕ್ಕಳಿಗೆ ಹಾಲು ಹಣ್ಣು, ಮೊಟ್ಟೆ ಪೌಷ್ಟಿಕ ಮಿಶ್ರಿತ ಬೆಳೆಕಾಳುಗಳ ಊಟ ಸಿಗುತ್ತಿತ್ತು. ಆದರೀಗ ಕೇವಲ ವಾರಕ್ಕೆ ಎರಡು ಮೊಟ್ಟೆ ಮಾತ್ರ ಕೊಡುತ್ತಿದ್ದಾರೆ. ಕೊರೊನಾ ಹೊಡೆತದಿಂದಾಗಿ ಇವರನ್ನೂ ಯಾರೂ ಕೂಡಾ ಮನೆಯ ಹತ್ತಿರವೂ ಸೇರಿಸಿಕೊಳ್ಳುತ್ತಿಲ್ಲ. ಕೆಲಸ ಮಾಡುತ್ತೇನೆ ಅಂದ್ರೂ ಯಾರೂ ಕೆಲಸ ಕೊಡದ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಕೂಡ ಇವರಿಗೆ ಕಷ್ಟ ಆಗ್ತಿದೆ ಅಂತಾರೆ ಸ್ಥಳೀಯರು.
ಕೊರೊನಾ ಮಹಾಮಾರಿಯಿಂದಾಗಿ ಮಕ್ಕಳಿಗೆ ಸಿಗುತ್ತಿದ್ದ ಪೌಷ್ಟಿಕ ಆಹಾರಕ್ಕೆ ಕತ್ತರಿ ಬಿದ್ದಿರೋದು ಒಂದೆಡೆಯಾದ್ರೆ, ಬಡಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಮೂಲಕ ಆಹಾರ ಸಿಗಬೇಕು. ಸರ್ಕಾರದಿಂದ ಎಲ್ಲವೂ ಸರಬರಾಜಾಗುತ್ತಿದ್ದರೂ ಮಕ್ಕಳು ಸೌಲಭ್ಯ ವಂಚಿತರಾಗಿದ್ದಾರೆ.