ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ 70 ಅಡಿ ಆಳಕ್ಕೆ ಉರುಳಿದ ಘಟನೆ ತಾಲೂಕಿನ ಉಳಿ ಗ್ರಾಮದ ಕಕ್ಯಪದವು- ಹೆಗ್ಗಣಗುಳಿ ರಸ್ತೆಯಲ್ಲಿ ನಡೆದಿದೆ. ಆದರೆ, ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಚಾಲಕ ಸಹಿತ ಮೂವರು ಪ್ರಯಾಣಿಕರು ಸಣ್ಣಪುಟ್ಟಗಳಾಗಿವೆ. ಅಜಿಲಮೊಗರು ಕಡೆಯಿಂದ ಬಂದ ಕಾರು ಕೆಳಕ್ಕೆ ರಸ್ತೆ ಮೇಲಿಂದ ಬಾಳೆಗಿಡದ ಪೊದೆಯಲ್ಲಿ ಜಾರಿ ತೋಡಿಗೆ ಉರುಳಿದೆ.
ಕಾರಿನ ಚಕ್ರ ಮೇಲ್ಮುಖವಾಗಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.